ಸಂಗಣ್ಣ ಕರಡಿ ನಿವಾಸಕ್ಕೆ ಲಕ್ಷ್ಮಣ್ ಸವದಿ ಬೇಟಿ
ಕಾಂಗ್ರೆಸ್ ಬಾಗಿಲಲ್ಲಿ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 15- ಸಂಸದ ಸಂಗಣ್ಣ ಕರಡಿ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಲಕ್ಷಣ ಸವದಿ ಬೇಟಿ ನೀಡಿ ಮಾತನಾಡಿದರು.
ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತಿಗೆ ಇದು ಇನ್ನಷ್ಟು ಪುಷ್ಠಿ ನೀಡಿದ್ದು ಸಂಗಣ್ಣ ಕರಡಿ ಮಾತ್ರ ಇನ್ನು ತಮ್ಮ ನಿರ್ದಾರ ಸ್ಪಷ್ಟ ಪಡಿಸಿಲ್ಲಾ.
ಸಂಸದ ಸಂಗಣ್ಣ ಕರಡಿ ನಿವಾಸದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ವಿನಾಶ ಕಾಲೇ ವೀಪರೀತ ಬುದ್ದಿ ಎನ್ನುವಂತೆ ಬಿಜೆಪಿಗರು ಮಾಡಿಕೊಳ್ಳುತ್ತಿದ್ದಾರೆ. ಸಂಸದ ಸಂಗಣ್ಣ ಕರಡಿ ಜನಪರ ಕೆಲಸ ಮಾಡಿದ ನಾಯಕ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದರು.
ನಾನು ಸಂಗಣ್ಣನವರನ್ನು ಈವರೆಗೆ ಕಾಂಗ್ರೆಸ್ ಗೆ ಆಹ್ವಾನಿಸಿಲ್ಲ. ಈ ಹಿಂದೆ ನಾನು ಕರೆದಾಗ ನನ್ನ ಜತೆಗೆ ಬಂದಿದ್ದಾರೆ. ಇದೀಗ ಸ್ನೇಹ ಪರವಾದ ಚರ್ಚೆ ಮಾಡಿದ್ದೇನೆ ಬೇರೆ ಪಕ್ಷದಲ್ಲಿ ಇದ್ದಾಗಲೂ ಅವರ ಮನೆಗೆ ಬಂದಿರುವೆ ಎಂದರು.
ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಭ ಪ್ರಶ್ನೆಗೆ ಬಂಗಾರ ಯಾರ ಅಂಗಡಿಯಲ್ಲಿ ಇದ್ದರೂ ಖರೀದಿ ಮಾಡುತ್ತಾರೆ. ಸಂಗಣ್ಣ ಓಡುವ ಕುದುರೆ ಇದ್ದಂತೆ.
ರಾಜಕೀಯದಲ್ಲಿ ಅವರು ಕೂಡ ನೆಲೆ ಹುಡುಕಿಕೊಳ್ಳಬೇಕಿದೆ. ಅವರ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ತಿರ್ಮಾನ ಮಾಡುತ್ತಿದ್ದಾರೆ ಎಂದರು.
ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ, ಕುಮಾರಸ್ವಾಮಿ ಅನುಭವಸ್ಥರು. ಅಂತಹ ಮಾತು ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ಸಂಗಣ್ಣ ಕರಡಿ ಮಾತನಾಡಿ, ಲಕ್ಷ್ಮಣ ಸವದಿ ನನ್ನ ಸಹೋದರರಿದ್ದಂತೆ. ನನಗೆ ಟಿಕೆಟ್ ತಪ್ಪಿದ ಹಿನ್ನಲೆ ಕರ್ಟಸಿಗೆ ಮನೆಗೆ ಬಂದು ಮಾತನಾಡಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ನಾಯಕರು ತಮ್ಮ ಪಕ್ಷಕ್ಕೆ ಆಹ್ವಾನ ಮಾಡುತ್ತಿದ್ದಾರೆ. ಈ ಕುರಿತು ನಾನಿನ್ನು ಯಾವುದೇ ನಿರ್ಣಯ ಮಾಡಿಲ್ಲ ಎಂದರು.
