ವಿಕಸಿತ ಹಾಗೂ ಸದೃಢ ಭಾರತಕ್ಕಾಗಿ ಮತ್ತೊಮ್ಮೆ ಮೋದಿ : ಗಾಲಿ ಲಕ್ಷ್ಮಿಅರುಣ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 17- ನಗರದ 1ನೇ ವಾರ್ಡ್, 21, 22, 23 ಹಾಗೂ 24ನೇ ವಾರ್ಡ್ಗಳಲ್ಲಿ ಪಕ್ಷದ ಅಭ್ಯರ್ಥಿಯಾದ ಬಿ.ಶ್ರೀರಾಮುಲು ಅಣ್ಣನವರ ಜೊತೆ ಲೋಕಸಭಾ ಚುನಾವಣೆಯ ಬಿರುಸಿನ ಪ್ರಚಾರದಲ್ಲಿ ಶ್ರೀಮತಿ ಗಾಲಿ ಲಕ್ಷ್ಮಿಅರುಣ ಜನಾರ್ದನರೆಡ್ಡಿ ಮೇಡಂ ಅವರು ಪಾಲ್ಗೊಂಡೆದರು
ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಯವರ ಸಾಧನೆಗಳನ್ನು ಶ್ರೀಮತಿ ಗಾಲಿ ಲಕ್ಷ್ಮಿಅರುಣ ಜನಾರ್ದನರೆಡ್ಡಿ ಮೇಡಂ ಅವರು ತಿಳಿಸಿ ಮತಯಾಚಿಸಲಾಯಿತು.
ವಿಕಸಿತ ಹಾಗೂ ಸದೃಢ ಭಾರತಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲು ಈಗಾಗಲೇ ದೇಶದ ಜನತೆ ನಿರ್ಧರಿಸಿದ್ದು, ದೇಶದೆಲ್ಲೆಡೆ ಮೋದಿಜಿ ಅವರ ಅಲೆ ಜೋರಾಗಿದೆ ಹಾಗೂ ಇಂದಿನ ಪ್ರಚಾರದಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿ ಶ್ರೀರಾಮುಲು ಅಣ್ಣನವರನ್ನು ಬಹುದೊಡ್ಡ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬುದನ್ನು ಶ್ರೀಮತಿ ಗಾಲಿ ಲಕ್ಷ್ಮಿಅರುಣ ಜನಾರ್ದನರೆಡ್ಡಿ ಮೇಡಂ ಅವರು ಕಣ್ಣಾರೆ ಕಂಡೆನು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯ ಮೋತ್ಕಾರ್ ಶ್ರೀನಿವಾಸ್, ಗುಡಿಗಂಟ ಹನುಮಂತು ಹಾಗೂ ಪಕ್ಷದ ಪದಾಧಿಕಾರಿಗಳು ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸ್ಥಳೀಯ ನಾಯಕರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
