WhatsApp Image 2024-04-20 at 6.32.52 PM

ಶಿಕ್ಷಕರ ಸಂಘಟನೆ ಬೆಳವಣಿಗೆಯಲ್ಲಿ ಪ್ರತಿನಿಧಿಗಳ ತಾಳ್ಮೆ, ತ್ಯಾಗ ಅವಶ್ಯಕ

ಕರುನಾಡ ಬೆಳಗು ಸುದ್ದಿ

ಕನಕಗಿರಿ, 20- ಶಿಕ್ಷಕರ ಸಂಘಟನೆಯ ಬೆಳವಣಿಗೆಯಲ್ಲಿ ಪ್ರತಿನಿಧಿಗಳ ತಾಳ್ಮೆ, ತ್ಯಾಗ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಣಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದರು.

ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ‌ ಕಚೇರಿಯಲ್ಲಿ ಗುರುವಾರ ರಾತ್ರಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕರ ಸಂಘದ ತಾಲ್ಲೂಕು ಘಟಕವು ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳನ್ನು ಬಗೆ‌ ಹರಿಸುವುದಲ್ಲದೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿ ಹಾಗೂ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ದಾನಿಗಳ ಸಹಾಯದಿಂದ‌‌ ನವೋದಯ, ಆದರ್ಶ ವಿದ್ಯಾಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ಉಚಿತ ತರಬೇತಿ ಮತ್ತು ಎಲ್ಲಾ ಶಾಲೆಗಳಿಗೆ ಉಚಿತ ಡೈಜಿಸ್ಟ್ ಗಳನ್ನು‌ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗಂ, ಗೌರವಾಧ್ಯಕ್ಷ ಶೇಖರಯ್ಯ ಕಲ್ಮಠ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಗೇರಿ, ನಿಡಗುಂದಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಲೀಂ ಗಡೇದ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಶಿರಗೇರಿ, ಜ್ಯೋತಿ ಭತ್ತದ, ಜಗದೀಶ ಟಿ.‌ಎಸ್, ವಿನೋದಾ, ಉಮೇಶ‌ ಲಮಾಣಿ, ನಿಂಗಪ್ಪ ಗುನ್ನಾಳ, ಎಸ್. ಎಂ.‌ಪಾಟೀಲ, ಕೋಳೇಕರ್, ಬಿ.‌ಎಸ್. ಯರವಿನ ತೇಲಿಮಠ, ಮಂಜುನಾಥ ಡಂಬಳ, ಸಿದ್ದಾರೂಢ ಬಣಕಾರ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!