
ಕಾಂಗ್ರೆಸ್ ನವರು ಕುಟುಂಬ ರಾಜಕಾರಣ ಮಾಡುವರು : ಮಾಜಿ ಸಚಿವ ಹಾಲಪ್ಪ ಆಚಾರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 20- ಈ ಹಿಂದೆ ದೇಶದಲ್ಲಿ ಕಾಂಗ್ರೇಸ್ ನವರು 50 ವರ್ಷ ಆಡಳಿತ ಮಾಡಿದು ಬ್ರಷ್ಟಾಚಾರ ಮಾಡಿದ್ದು ಹೆಚ್ಚು ಅವರು ರೈತರ ಬಗ್ಗೆ ಆಲೋಚನೆ ಮಾಡಿಲ್ಲ ಅವರಿಗೆ ದೇಶದ ಬಡವರ ಕಾಳಜಿ ಬೇಕಾಗಿಲ್ಲ ರಾಜ್ಯದಲ್ಲಿ ಅಬಕಾರಿ ಮತ್ತು ಇನ್ನಿತರ ದರಗಳು ಗಗನಕ್ಕೆ ಏರಿವೆ ಕಾಂಗ್ರೆಸ್ ನವರು ಬರಿ ಕುಟುಂಬ ರಾಜಕಾರಣಿ ಮಾಡುವರು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ತಾಲೂಕಿನ ವಣಗೇರಿ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯ ಅಭ್ಯರ್ಥಿ ಪರ ಮತ ಯಾಚನೆ.ಮತ್ತು ಬಹಿರಂಗ ಸಭೆ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಹಿಂದೆ ಕಾಂಗ್ರೆಸ್ ನವರು ಅಧಿಕಾರದ ಅವಧಿಯಲ್ಲಿ ದೇಶ ವಿದೇಶಗಳಲ್ಲಿ ಇವರು ಹೋದರೆ ಹಾವಾಡಿಗರ ದೇಶದವರು ಎಂದು ಕರೆಯುತ್ತಿದ್ದರು ನಂತರ, 2014 ರಲ್ಲಿ ದೇಶದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಸಾಕಷ್ಟು ಅಭಿವೃದ್ಧಿ ಹೊಂದಿದೆ.
ದೇಶದ ಸಮಗ್ರ ಅಭಿವೃದ್ಧಿ ಮಾಡಿ ಉತ್ತಮ. ದಕ್ಷ. ಪ್ರಮಾಣಿಕ ಆಡಳಿತ ಮಾಡಿ ದೇಶದ ಎಲ್ಲಾ ಜನರ ಪ್ರೀತಿ ವಿಶ್ವಾಸ ಗೆದ್ದ ಜನ ಮೆಚ್ಚಿದ ನಾಯಕ. ದೇಶದಲ್ಲಿ ಮೋದಿ ಅವರನ್ನು ಎಲ್ಲರೂ ಇಷ್ಟ ಪಡುತ್ತಾರೆ 2024 ರಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವದು ಖಚಿತ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ
ದೇಶದಲ್ಲಿ ನರೇಂದ್ರ ಮೋದಿಯವರು ಅಲೆ ಪ್ರಾರಂಭವಾಗಿದೆ ದೇಶವು ಉಳಿದರೆ ನಾವು ಉಳಿಯಲು ಸಾಧ್ಯ ದೇಶ ಸುಭದ್ರವಾಗಿರಬೇಕಾದರೆ ನರೇಂದ್ರ ಮೋದಿಯವರು ನಮ್ಮ ದೇಶಕ್ಕೆ ಪ್ರಧಾನಿಯಾಗಬೇಕು ಸದ್ರಡ್ ಭಾರತ ನಿಮಾ೯ಣಕ್ಕ ಬಿಜೆಪಿಯ ಕಮಲದ ಗುರುತಿಗೆ ಮತ ಹಾಕುವ ಮೂಲಕ ಬೆಂಬಲಿಸಿ ಗೆಲಿಸಬೇಕು ಎಂದು ಹೇಳಿದರು.
ನಂತರ ಮಾಜಿ ಸಂಸದ ಕೆ ವೀರುಪಾಕ್ಷಪ್ಪ ಮಾತನಾಡಿ ದೇಶ ಪವರ್ ಪುಲ್ ದೇಶ ಎಂದು ತೋರಿಸಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರು ಇವರು ಪ್ರಧಾನಿ ಯಾದ ಮೇಲೆ ನಮ್ಮ ದೇಶದ ಸಂಸ್ಕಾರ ,ಸಂಪ್ರದಾಯ ಸಂಸ್ಕೃತಿ ಉಳಿದಿರುವದು
ಬಿಜೆಪಿ ಪಕ್ಷದಿಂದ ಮಾತ್ರ ಸಾದ್ಯ,ಕಾಂಗ್ರೇಸ್ ಯವರಿಗೆ ಸಂಸ್ಕಾರ ಗೊತ್ತಿಲ್ಲ ಎಂದರು ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಮೂರು ಬಾರಿ ಬಿಜೆಪಿ ಗೆಲವೂ ಸಾಧಿಸಿದೆ ನಾಲ್ಕನೆ ಬಾರಿಗೆ ಬಿಜೆಪಿ ಪಕ್ಷವು ಗೆಲುವು ಖಚಿತ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವದು ಗ್ಯಾರಂಟಿ ಅದಕೋಸ್ಕರ ಮೋದಿ ಅವರು ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರಗೆ ಬೆಂಬಲಿಸಿ ಎಂದು ಹೇಳಿದರು.
ನಂತರ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳ್ಳಗಣ್ಣನವರು ಮಾತನಾಡಿ, ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಬೂತ್ ಮಟ್ಟದಲ್ಲಿ ಮತ ಯಾಚನೆ ಮಾಡುವದರ ಮೂಲಕ ಬಿಜೆಪಿ ಪಕ್ಷದ ಗಲವುಗಾಗಿ ಶ್ರಮಿಸಬೇಕು ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದು, 9 ರಿಂದ 10 ತಿಂಗಳು ಆಯಿತು ಯಾವುದೇ ಅಭಿವೃದ್ಧಿ ಯಾಗದಲ್ಲಿ ಅವರ ಸರಕಾರದಲ್ಲಿ ಗ್ಯಾರಂಟಿ ಬಿಟ್ಟರೆ ಮತ್ತೆನು ಅನುದಾನ ವಿಲ್ಲ ಕಾಂಗ್ರೇಸ್ ಪಕ್ಷವನ್ನುಸೊಲೀಸಬೇಕು ನರೇಂದ್ರಮೋದಿಯವರನ್ನು ನಮ್ಮ ದೇಶದ ನಾಯಕ ಎಂದು ಆಯ್ಕೆ ಮಾಡಬೇಕು ಜಾತಿ ಮತ ಪಂಥ ಮರೆತು ದೇಶ ಸುರಕ್ಷಿತವಾಗಿ ಆರ್ಥಿಕವಾಗಿ ಬೆಳೆಯ ಬೇಕಾದರೆ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಕಾಂಗ್ರೆಸ್ ಪಕ್ಷದವರು ಅಧಿಕಾರದ ದಾಹ ಮತ್ತು ಗ್ಯಾರಂಟಿ ಯೋಜನೆ ಗುಂಗಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಎಂದು ಹೇಳಿದರು.
ಪ್ರತಿ ಬೂತ್ ಮಟ್ಟದಲ್ಲಿ ಹೆಚ್ಚಿನ ಮತ ಹಾಕಿಸುವ ಮುಖಾಂತರ ಜನರಿಗೆ ಬಿಜೆಪಿ ಪಕ್ಷದ ಯೋಜನೆಗಳ ಕುರಿತು ಪ್ರತಿ ಮನೆ ಮನೆಗೆ ಹೋಗಿ ತಿಳಿಸುವ ಮೂಲಕ ಮತ ಹಾಕಿಸಬೇಕು ದೇಶ ಮತ್ತು ರಾಜ್ಯ ಧರ್ಮ ಸಂಸ್ಕಾರ, ಉಳಿಯ ಬೇಕಾದರೆ ಬಿಜೆಪಿ ಬೆಂಬಲಿಸಿ.ರೈತರ ಪರ ಕಾಳಜಿ ವಹಿಸುವ ಬಿಜೆಪಿಗೆ ಬೆಂಬಲಿಸಬೇಕು ಎಂದರು.
ನಂತರ ಕೊಪ್ಪಳ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ ಮಾತನಾಡಿ
ನನಗೆ ಕೇಂದ್ರ ಮತ್ತು ರಾಜ್ಯದ ಮತ್ತು ಜಿಲ್ಲೆಯ ನಾಯಕರು ನನ್ನಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ.ಅವರಿಗೆ ನನ್ನ ಅನಂತ ಧನ್ಯವಾದಗಳನ್ವು ತಿಳಿಸು ತ್ತೇನೆ ನಮ್ಮ ದೇಶದಲ್ಲಿ ಕಳೇದ10 ವರ್ಷದಲ್ಲಿ ಭಾರತ ದೇಶವನ್ನು ಬಲಿಷ್ಠ ದೇಶವನ್ವಾಗಿ ಮಾಡಿದ್ದಾರೆ ಇಡೀ ಪ್ರಪಂಚವೇ ನಮ್ಮ ದೇಶದ ಕಡೇ ತಿರುಗಿ ನೂಡುವಂತೆ ಮಾಡಿದ್ದಾರೆ ರಾಜಕೀಯದಲ್ಲಿ ನಾನು ಮೊದಲಲ್ಲ ನಮ್ಮ ತಂದೆಯಾದ ಕೆ ಶರಣಪ್ಪ ವಕೀಲರು ಕುಷ್ಟಗಿ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸರಕಾರವು ರೈಲ್ವೆ.ಯೋಜನೆ ರಾಷ್ಟ್ರೀಯ ಹೆದ್ದಾರಿ. ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದಕ್ಷ ಪ್ರಮಾಣಿಕ ರಾಜಕಾರಣಿಯಾಗಿ ಜನ ಮೆಚ್ಚಿದ ನಾಯಕರಾಗಿದ್ದಾರೆ ನನ್ನಗೆ ಒಂದು ಅವಕಾಶ ಮಾಡಿ ಕೂಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೂಡಿ ನಮ್ಮ ಕೊಪ್ಪಳ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಮತ್ತು ಎಲ್ಲರೂಂದಿಗೆ ಒಟ್ಟಿಗೆ ಉತ್ತಮ ಬಾಂಧವ್ಯದಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಂತರ ಬಿಜೆಪಿ ಹಿರಿಯ ಮುಖಂಡ ಬಸಲಿಂಗಪ್ಪ ಭೋತೆ ಅವರು ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಗುರು ಆಗಿದ್ದಾರೆ ಎಲಿ ಹೋದರು ಮೋದಿ ಮೋದಿ ಎಂದು ಕುಗುತ್ತಾರೆ ಇದರಿಂದ ಅವರ ಸುಭದ್ರ ಆಡಳಿತ ನೀಡುವ ಮೂಲಕ ದೇಶದ ಹಿತ ಕಾಪಾಡಿದ್ದಾರೆ ಹಲವಾರು ರೈತರ.ಪರ ಯೋಜನೆಗಳನ್ನು ಜಾರಿಗೋಳಿಸಿದ್ದಾರೆ ರಾಷ್ಠ್ರ ಮತ್ತು ನಮ್ಮ ಕ್ಷೇತ್ರ ಅಭಿವೃದ್ದಿ ಯಾಗಬೇಕಾದರೆ ಬಿಜೆಪಿ ಪಕ್ಷಕ್ಕೆ ಮತ ನೀಡವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಕಮಲದ ಗುರುತಿಗೆ ಹೆಚ್ಚಿನ ಮತಗಳನ್ನುನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮತಯಾಚನೆ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಕುಮಾರ ಗುಳಗಣ್ಣನವರು ಶಿವಶಂಕರರಾವ ದೇಸಾಯಿ. ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳ್ಳಗಣ್ಣನವರು. ಮುಖಂಡರಾದ ಬಸಲಿಂಗಪ್ಪ ಭೋತೆ ಮಂಡಲದ ಅಧ್ಯಕ್ಷ ಮಾರುತಿ ಗೌರಾಳ ವೀರಣ್ಣ ಹುಬ್ಬಳ್ಳಿ ಅಮರೇಶ ಹುಬ್ಬಳ್ಳಿ.ಸಿಎಚ್ ಪೋಲೀಸ ಪಾಟೀಲ ಶಿವಶಂಕರರಾವ ದೇಸಾಯಿ.ರತ್ನನ್ ದೇಸಾಯಿ. ಪ್ರಕಾಶ ಬೇಲೇರಿ ವಕೀಲರು .ಈಶಪ್ಪ ಹಿರೇಮನಿ, ಶಕುಂತಲಾದೇವಿ ಮಾಲಿ ಪಾಟೀಲ್, .ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಶರಣಪ್ಪ ರಾಂಪೂರು ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಕೆಂಚಮ್ಮನವರ ಜೆಡಿಎಸ್ ತಾಲೂ ಅಧ್ಯಕ್ಷ ,ಬಸವರಾಜ ಗುಳಗುಳಿ, ವಿಶ್ವನಾಥ ಮರಿಬಸಪ್ಪನವರು, ಶಿವಲೀಲಾ ದಳವಾಯಿ ಪಕ್ಷದ ವಿವಿಧ ಮೊರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಇತರರು ಭಾಗವಹಿಸಿದ್ದರು.