1

ಶಾಸಕ ನಾರಾ ಭರತ್ ರೆಡ್ಡಿ ಜನ್ಮ ದಿನ : 135 ಅಡಿಗಳ ಕಟೌಟ್ ನಿರ್ಮಾಣ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 23- ಇದೇ ತಿಂಗಳು ಅ.25 ರಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆ ಸತೀಶ ರೆಡ್ಡಿ ನೇತೃತ್ವದ ಶಾಸಕರ ಅಭಿಮಾನಿಗಳ ಬಳಗದ ಸದಸ್ಯರು (ಎನ್’ಬಿಆರ್ ಟೀಮ್) ಅತ್ಯಂತ ವಿಜೃಂಭಣೆಯಿ0ದ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.

ಜನ್ಮ ದಿನದ ಅಂಗವಾಗಿ ನಗರದ ಗವಿಯಪ್ಪ (ಮೋತಿ ಸರ್ಕಲ್) ವೃತ್ತದ ಬಳಿ ೧೩೫ ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ೧೩೫ ಅಡಿ ಎತ್ತರ ಕಬ್ಬಿಣದ ಕಂಬಿಗಳನ್ನು ಜೋಡಿಸಲಾಗಿದ್ದು, ಬುಧವಾರ ನಸುಕಿನ ಜಾವ ಶಾಸಕ ನಾರಾ ಭರತ್ ರೆಡ್ಡಿ ಅವರ ಕಟೌಟ್ ಕಟ್ಟುವ ಮುನ್ನ ಪೂಜೆ ಸಲ್ಲಿಸಲಾಯಿತು.

ಬೆಂಗಳೂರು ಮೂಲದ ಎಸ್‌ಎಸ್ ಈವೆಂಟ್ಸ್ ಸಂಸ್ಥೆಯು ಈ ಕಟೌಟ್ ನಿರ್ಮಾಣ ಮಾಡಿದೆ. ಇಡೀ ರಾಜ್ಯದಲ್ಲಿ ರಾಜಕೀಯ ಕ್ಷೇತ್ರದ ಗಣ್ಯರ ಪೈಕಿ ಇದೇ ಮೊದಲ ಬಾರಿಗೆ ಇಂತಹ ಅತಿ ಎತ್ತರದ ಕಟೌಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಎನ್’ಬಿಆರ್ ಟೀಮ್ ಸಂಘಟಕರು ತಿಳಿಸಿದ್ದಾರೆ.

ಬುಧವಾರ ನಸುಕಿನ ಜಾವ ಪೂಜೆ ಸಲ್ಲಿಸಿದ ವೇಳೆ ಎನ್‌ಬಿಆರ್ ಟೀಮಿನ ಸದಸ್ಯರಾದ ಮೋಕ ನಾಗರಾಜ, ಟಿ.ಹೆಚ್.ಶ್ರೀನಿವಾಸ, ಟಿ.ಹೆಚ್.ಚರಣರಾಜ್, ಹುಸೇನ ನಗರ ರಘು, ಜಗದೀಶ, ರಾಜಶೇಖರ ರೆಡ್ಡಿ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!