
ಇಂದರಗಿ ; ಮಗುವಿನ ಮೇಲೆ ಕರಡಿ ದಾಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,16- ಮಂಗಳವಾರ ತಾಲ್ಲೂಕಿನ ಇಂದರಗಿ ಗ್ರಾಮದಲ್ಲಿ ರಾಜು ಎಂಬು ನಾಲ್ಕು ವರ್ಷದ ಮಗುವಿನ ಮೇಲೆ ಕರಡಿ ದಾಳಿ ನಡೆಸಿದ್ದು ಮಗು ತೀವ್ರವಾಗಿ ಗಾಯಗೊಂಡಿದೆ.
ಹೊಲದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕರಡಿ ಏಕಾ ಏಕಿ ದಾಳಿ ಮಾಡಿದ್ದು, ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿದೆ.
ಮಂಗಳವಾರ ಮಗುವಿನ ಪೋಷಕರು ಗ್ರಾಮದ ಹೊರವಲಯದ ಬೆಟ್ಟದ ಅಂಚಿಗಿನ ಹೊಲದಲ್ಲಿ ಮೆಕ್ಕೆಜೋಳ ಬೆಳೆದಿದ್ದು ಬೆಳೆ ಸಿಂಪಡಣೆ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದರು. ಮಗುವನ್ನು ಬದುವಿನ ಸಮೀಪ ಕೂಡಿಸಿದ್ದರು. ಮೆಕ್ಕೆಜೋಳದ ಹೊಲದಲ್ಲಿ ಹೊಕ್ಕಿದ್ದ ಕರಡಿ ಮಗುವಿನ ಮೇಲೆ ದಾಳಿ ಮಾಡಿದೆ.
ಕರಡಿ ದಾಳಿ ಮಾಡಿ ಕೆಲ ಹೊತ್ತಿನಲ್ಲಿಯೇ ಮಗುವನ್ನು ಇಲ್ಲಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚುವರಿ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.