
ಅಪರಿಚಿತ ವ್ಯಕ್ತಿ ಶವದ ಅಸ್ಥಿಪಂಜರ ಪತ್ತೆ : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಅಪರಿಚಿತ ವ್ಯಕ್ತಿ ಮೃತಪಟ್ಟ ವ್ಯಕ್ತಿ ಶವದ ಅಸ್ಥಿಪಂಜರ ಪತ್ತೆ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್.ನಂ:೫/೨೦೨೩ ಕಲಂ: ೧೭೪ ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವೆಂಕಟಗಿರಿ ಹೋಬಿಳಿಯ ರಾಮನ ಮೂಲೆಯ ಗುಡ್ಡದಲ್ಲಿ ಒಂದು ಗಂಡಸಿನ ಶವದ ಅಸ್ಥಿಪಂಜರ ಬಿದ್ದಿರುತ್ತದೆ, ಸುಮಾರು ೧೫ ರಿಂದ ೨೦ ದಿನಗಳ ಹಿಂದೆ ಶವ ಬಿದ್ದು ಮೈಮೇಲಿನ ಚರ್ಮ, ಮಾಂಸಖಂಡ ಕಿತ್ತಿ ಹೋಗಿ ಕೇವಲ ಎಲುಬು ಮತ್ತು ಮೂಳೆಗಳು ಅಸ್ಥಿ ಪಂಜರದAತೆ ಕಂಡುಬರುತ್ತದೆ. ಮುಖದಲ್ಲಿ ಬಿಳಿಯ ಗಡ್ಡ ಕಂಡುಬರುತ್ತಿದ್ದು, ಈ ಶವವು ಅಂದಾಜು ೫೦ ರಿಂದ ೫೫ ವರ್ಷದ ವ್ಯಕ್ತಿಯಂತೆ ಕಂಡುಬರುತ್ತಿದ್ದು, ಶವ ಮೇಲೆ ಆಫ್ ಶರ್ಟ ಇದ್ದು, ಹಳೆಯ ಮಾಸಿದಂತಾಗಿದ್ದು, ಈ ಶರ್ಟಿನ ಮೇಲೆ ಆರ್.ಬಿ.ಟೈಲರ್ ಬಸಾಪಟ್ಟಣ ಎಂದು ಇರುತ್ತದೆ.
ಈ ವ್ಯಕ್ತಿಯ ಚರ್ಮವನ್ನು ಕಾಡು ಪ್ರಾಣಿಗಳು ಕಿತ್ತಿ ತಿಂದAತೆ ಕಂಡುಬರುತ್ತದೆ.
ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂ: ೦೮೫೩೩-೨೩೦೮೫೪, ಪಿ.ಐ ಮೊ.ಸಂ: ೯೪೮೦೮೦೩೭೩೦, ಇಲ್ಲಿಗೆ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ ಠಾಣೆಯ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.