ವಿಜಯನಗರ ಸಾಮ್ರಾಜ್ಯದ ಕಲಾ ವೈಭವ ಕಣ್ತುಂಬಿಕೊಂಡ ಕೇಂದ್ರ ಹಣಕಾಸು ಆಯೋಗದ ನಿಯೋಗ

ಕರುನಾಡ ಬೆಳಗು ಸುದ್ದಿ

ವಿಜಯನಗರ, 1- ಭಾರತ ಸರ್ಕಾರದ ೧೬ನೇ ಕೇಂದ್ರ ಹಣಕಾಸು ಆಯೋಗದ ನಿಯೋಗವು ವಿಜಯನಗರ ಜಿಲ್ಲೆಯ ಹಂಪಿಯ ಪರಿಸರದಲ್ಲಿ ಸಂಚರಿಸಿತು.

ನಿಯೋಗದ ಅಧ್ಯಕ್ಷರಾದ ಅರವಿಂದ ಪಿ, ಸದಸ್ಯರಾದ ಅಜಯ್ ನಾರಾಯಣ ಝ್ಹಾ, ಅಣೈ ಜಾರ್ಜ್ ಮ್ಯಾಥ್ಯೂ, ಸೌಮ್ಯ ಕಾಟಿ ಗೋಶ್, ಮನೋಜ ಪಾಂಡೆ, ಜಂಟಿ ನಿರ್ದೇಶಕರಾದ ರಾಹುಲ್ ಜೈನ್, ಉಪ ಕಾರ್ಯದರ್ಶಿ ಅಜಿತ್‌ಕುಮಾರ ರಂಜನ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕುಮಾರ ವಿವೇಕ್, ಉಪ ಕಾರ್ಯದರ್ಶಿ ಸಂದೀಪ್ ಕುಮಾರ, ವಿಶೇಷ ಕರ್ತವ್ಯಾಧಿಕಾರಿ ಓಂ ಸಾಯಿ, ಸದಸ್ಯರ ಆಪ್ತ ಕಾರ್ಯದರ್ಶಿ ಪ್ರೊಮಿಳಾ ರಾಜವಂಶಿ, ಸದಸ್ಯರ ಕನ್ಸಲ್ಟಂಟ್ ಸುಧಾ ರಾಜಗೋಪಾಲನ್ ಅವರನ್ನೊಳಗೊಂಡ ತಂಡವು ಬೆಳಗ್ಗೆ ಮೊದಲಿಗೆ ಲೋಟಸ್ ಮಹಲ್‌ಗೆ ಭೇಟಿ ಮೂಲಕ ವೀಕ್ಷಣೆ ಆರಂಭಿಸಿತು. ಬಳಿಕ ಹಜಾರಾ ರಾಮ ಟೆಂಪಲ್, ರಾಯಲ್ ಎನ್‌ಕ್ಲೋಜರ್, ರಾಣಿ ಸ್ನಾನಗೃಹ, ಉಗ್ರ ನರಸಿಂಹ, ಬದವಲಿಂಗ್‌ಗಳಿಗೆ ಭೇಟಿ ನೀಡಿದರು. ಬಳಿಕ ಇವೋಲ್ವ್ ಬ್ಯಾಕ್‌ಗೆ ಆಗಮಿಸಿ ಅಲ್ಲಿಂದ ವಿಶೇಷ ಬಸ್ ಮೂಲಕ ವಿಜಯನಗರದಿಂದ ನಿರ್ಗಮಿಸಿದರು.

ಆಗಸ್ಟ್ ೩೦ರಂದೇ ವಿಜಯನಗರಕ್ಕೆ ಆಗಮಿಸಿ ಕೇಂದ್ರ ಹಣಕಾಸು ಆಯೋಗದ ನಿಯೋಗವನ್ನು ಬರಮಾಡಿಕೊಂಡಿದ್ದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ.ಅತಿಕ್ ಅವರು ನಿಯೋಗದ ಸದಸ್ಯರೊಂದಿಗಿದ್ದು ವೀಕ್ಷಣೆ ನಡೆಸಿದರು.

ನಿಯೋಗದೊಂದಿಗೆ ಆರ್ಥಿಕ ಇಲಾಖೆಯ ಸರ್ಕಾರದ ಆಯವ್ಯಯ ಮತ್ತು ಮಾನವ ಸಂಪನ್ಮೂಲದ ಕಾರ್ಯದರ್ಶಿಗಳಾದ ಡಾ.ಪಿ.ಸಿ.ಜಾಫರ್, ಉಪ ಕಾರ್ಯದರ್ಶಿಗಳಾದ ಮೊಹಮ್ಮದ್ ಇಕ್ರಾಮುಲ್ಲಾ ಶರೀಫ್, ಡಾ.ಗೋಪಾಲಕೃಷ್ಣ ಬಿ., ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ಜಿಲ್ಲಾ ಪಂಚಾಯತ್ ಸಿಇಓ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ ಷಾಹ, ಸಹಾಯಕ ಆಯುಕ್ತರಾದ ವಿವೇಕಾನಂದ ಪಿ., ತಹಸೀಲ್ದಾರ ಶ್ರುತಿ ಸೇರಿದಂತೆ ಇತರರು ಇದ್ದರು.

ನಿಯೋಗದಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ಲೈಜನ್ ಅಧಿಕಾರಿಗಳಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಣ್ಣ ಬಿರಾದಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮನೋಹರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಹೆಚ್.ಎಸ್., ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ ಮುದಗಲ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಪ್ರಭುಲಿಂಗ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರಪ್ಪ ಕೆ.ಬಿ., ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ರಿಯಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂದು ಅಂಗಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಶಾಶುಮೋದ್ದೀನ್, ತೋಟಗಾರಿಕಾ ಇಲಾಖೆಯ ಅಧಿಕಾರಿ ವಿಜಯ್ ನೀಚಾಪುರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರಾದ ದೀಪಾ ಅವರು ಕಾರ್ಯನಿರ್ವಹಿಸಿದ್ದರು.

ಆಗಸ್ಟ್ 30ರಂದೇ ಭೇಟಿ : ಕೇಂದ್ರ ಹಣಕಾಸು ಆಯೋಗದ ನಿಯೋಗದಲ್ಲಿದ್ದ ಹಿರಿಯ ಅಧಿಕಾರಿಗಳ ತಂಡವು ಆಗಸ್ಟ್ ೩೦ರಂದು ವಿಜಯನಗರ ಜಿಲ್ಲೆಗೆ ಆಗಮಿಸಿತ್ತು. ಅಂದು ಸಂಜೆ ತೋರಣಗಲ್ಲಿನಿಂದ ವಿಶೇಷ ಬಸ್ ಮೂಲಕ ವಿಜಯನಗರ ಜಿಲ್ಲೆಯ ಹಂಪಿಗೆ ಆಗಮಿಸಿದ್ದ ತಂಡವು ಸಂಜೆ ವೇಳೆಯಲ್ಲಿ ಮೊದಲಿಗೆ ವಿಜಯವಿಠ್ಠಲ್ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ಬಳಿಕ ಹಂಪಿಯ ಪ್ರಸಿದ್ಧ ಶ್ರೀವಿರುಪಾಕ್ಷೇಶ್ವರ ದೇವಾಲಯದ ವೀಕ್ಷಣೆ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!