
ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ್ ಕಾಲೇಜ್‌ಗೆ “ಎ ಗ್ರೇಡ್”
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ನ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಇತ್ತಿಚಗೆ ಎನ್‌ಸಿಐಎಸ್‌ಎಂನ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕಿಅI) ಇವರಿಂದ ನಡೆದ ಇನ್ಸಪೆಕ್ಷನ್‌ನಲ್ಲಿ ಕಾಲೇಜಿಗೆ “ಎ ಗ್ರೇಡ್” ಬಂದಿದ್ದು ಬಹಳ ಸಂತೋಷದ ಸಂಗತಿಯಾಗಿದೆ.
ನಮ್ಮ ಮಹಾವಿದ್ಯಾಲಯವು ಭಾರತ ದೇಶದಲ್ಲಿ ೨೮ನೇ ಸ್ಥಾನ, ಕರ್ನಾಟಕದಲ್ಲಿ 9ನೇ ಸ್ಥಾನ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಸ್ಥಾನವನ್ನು ಹೊಂದಿದ್ದು ಅತಿ ಹೆಮ್ಮೆಯ ಸಂಗತಿಯಾಗಿದೆ.
ಈ ಸಾಧನೆಗೆ ಆಡಳಿತ ಮಂಡಳಿಯು ಪ್ರಾಚಾರ್ಯರಿಗೆ, ಬೋಧಕ-ಬೋಧಕೇತರ, ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಹರ್ಷ ವ್ಯಕ್ತ ಪಡಿಸಿದ್ದಾರೆ.