
ದಸರಾ ನಿಮಿತ್ತ ನಗರದಲ್ಲಿ ಭರ್ಜರಿ ಬಯಲು ಕುಸ್ತಿ ಪಂದ್ಯಾವಳಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 13- ವಿಜಯದಶಮಿ ದಸರಾ ಹಬ್ಬದ ನಿಮಿತ್ತ ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬಯಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಾಸಕ ಗವಿಯಪ್ಪನವರು ಇಂದು ಅತ್ಯಂತ ಸಂತೋಷದ ವಿಚಾರ ದಸರಾ ಹಬ್ಬದ ಈ ವಿಶೇಷ ಕ್ರೀಡಾ ಕಾರ್ಯಕ್ರಮವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವಂತಹದು ಹೀಗೆ ಈ ಪಾರಂಪರಿಕ ಮುಂದಿನ ಪೀಳಿಗೆಗೂ ಮುಂದುವರಿಯಬೇಕು ಕುಸ್ತಿ ಆಡುವುದರಿಂದ ದೇಹದ ಕ್ಷಮತೆ ಹೆಚ್ಚುತ್ತದೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಈ ರೀತಿಯ ಕ್ರೀಡಾ ಕಾರ್ಯಕ್ರಮಗಳು ನಮ್ಮ ಯುವಪೀಳಿಗೆಗೆ ಪ್ರೇರಣೆ ನೀಡುತ್ತದೆ ಎಂದರು.
ಈ ಸಂದರ್ಭ ಅನೇಕ ಗಣ್ಯರು ಭಾಗವಹಿಸಿ ಸಾಕ್ಷಿಯಾದರು.