ಅ. 1ರಂದು ಕವಲೂರು ಗ್ರಾಮಸ್ಥರಿಂದ ರಸ್ತೆಗಾಗಿ ಬೃಹತ್ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಶ್ರೀ ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಮಹಿಳಾ ಒಕ್ಕೂಟದ ನೇತೃತದಲ್ಲಿ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಯುವಕರ ಸಹಕಾರದೊಂದಿಗೆ ಅ. 1 ರಂದು ಕವಲೂರು ಗ್ರಾಮ ಬಂದ್ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.
ಅವರು ಸೋಮವಾರದಂದು ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ ೧೫ ವರ್ಷಗಳಿಂದ ರಸ್ತೆಗಳು ಹಾಳಾಗಿದ್ದು ಕವಲೂರು ಗ್ರಾಮಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ತಗ್ಗು-ಗುಂಡಿಗಳಿAದ ಕೂಡಿದ್ದು ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಹಾಗೂ ರೋಗಿಗಳು ಆಸ್ಪತ್ರೆಗೆ ಹೊಗಲಾರದೆ ಪರದಾಡುತಿದ್ದಾರೆ.
ಕವಲೂರು ಗ್ರಾಮದಿಂದ ಮುಂಡರಗಿ, ಅಳವಂಡಿ, ಬನ್ನಿಕೊಪ್ಪ, ಹಂದ್ರಾಳ ಮತ್ತು ಗುಡಗೆರಿ ಗ್ರಾಮಗಳಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ಹಾಳಾಗಿದ್ದು, ರಸ್ತೆಯ ಅಭೀವೃದ್ದಿಗೆ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಅಧಿಕಾರಿಗಳ ನಿರ್ಲಕ್ಷö್ಯ ಖಂಡಿಸಿ ಅ. 1 ರಂದು ಬೆಳಿಗ್ಗೆ 8 ರಿಂದ ಸಾಯಂಕಾಲ 6 ರವರೆಗೆ ಗ್ರಾಮ ಬಂದ್ ಮಾಡಿ ಪ್ರತಿಭಟನೆ ಮಾಡಲಿದ್ದೆವೇ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ 1500 ಮಹಿಳಾ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮದ ರೈತರು, ಯುವಕರು ಭಾಗವಹಿಸಿ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ಸಿಂದೋಗಿ, ಉಪಾಧ್ಯಕ್ಷೆ ರೇಣುಕಾ ಜೋಗಿನ, ಕಾರ್ಯದರ್ಶಿ ಶೋಭಾ ಬೀಳ್ಗಿ, ಸದಸ್ಯೆ ರತ್ನಾ ಊಟಾಗನೂರು ಹಾಗೂ ಶರಣಪ್ಪ ಜೇಡಿ, ಶಮಿನಾಬಾನು ಇತರರು ಇದ್ದರು.