
ಕಲಾವಿದರ ನಿರ್ಲಕ್ಷವನ್ನ ಖಂಡಿಸಿ ಸಾಂಸ್ಕೃತಿಕ ಶಾಂತಿಯುತ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಬೆಂಗಳೂರು, 23- ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ತನ್ನದೇ ಆದ ವಿಶಿಷ್ಟ ಹೆಸರನ್ನು ಹೊಂದಿದೆ ಕರ್ನಾಟಕ ಜಾನಪದ ತವರು ಎಂದೇ ಹೆಸರು ಮಾಡಿರುವ ಜಾನಪದ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಕಚೇರಿ ಕನ್ನಡ ಭವನ ಜನಪದ ಕಲಾವಿದರನ್ನು ನಿರ್ಲಕ್ಷಿಸುತ್ತ ಬಂದಿದೆ.
ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಕಲಾವಿದರಿಗೆ ಕಲಾ ಸಂಸ್ಥೆಗಳಿಗೆ ಸಮರ್ಪಕವಾಗಿ ನ್ಯಾಯಯುತವಾಗಿ ಧನಸಹಾಯವನ್ನು ನೀಡುವಲ್ಲಿ ತಾರತಮ್ಯ ನೀತಿಯನ್ನು ಕೇಂದ್ರ ಕಚೇರಿ ಅನುಸರಿಸುತ್ತಿದ್ದು ಇದನ್ನು ಖಂಡಿಸಿ ಈಗಾಗಲೇ ಅನೇಕ ಬಾರಿ ಬೆಂಗಳೂರು ನಗರದಲ್ಲಿ ಹೋರಾಟ ಮಾಡಿದ್ದರು ಎಚ್ಚೆತ್ತುಕೊಳ್ಳದ ಇಲಾಖೆಯ ವಿರುದ್ಧ ಬೆಂಗಳೂರಿನಲ್ಲಿ ದಿನಾಂಕ 25-07-2024 ಗುರುವಾರದಂದು ಬೆಳಿಗ್ಗೆ 11:30ಕ್ಕೆ ಸಾಂಸ್ಕೃತಿಕ ಶಾಂತಿಯುತ ಪ್ರತಿಭಟನೆ ಮಾಡಲು ರಾಜ್ಯದ ಸಾಂಸ್ಕೃತಿಕ ಜಾನಪದ ಕಲಾವಿದರು ನಿರ್ಧರಿಸಿದ್ದು ಒಗ್ಗಟ್ಟಾಗಿ ಎಲ್ಲಾ ಕಲಾವಿದರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಸಚಿವರ ಗಮನಕ್ಕೆ ತರುವ ಯೋಜನೆ ಇದೆ 2023- 24 ನೇ ಸಾಲಿನ 30% ಅಂಡ್ 40% ಧನಸಹಾಯ ನೀಡಿದ್ದು ಪೂರ್ಣ ಅನುದಾನದ ಹಣವನ್ನು ಸಂಘ ಸಂಸ್ಥೆಗಳಿಗೆ ನೀಡದೇ ಇರುವುದರಿಂದ ಕಲಾವಿದರ ಸಂಕಷ್ಟದ ಅಳಲನ್ನು ತೋಡಿಕೊಂಡಿದ್ದಾರೆ.
ಇಲಾಖೆ ಪರ್ಸೆಂಟೇಜ್ ಅನುದಾನ ನೀಡಿ ಕೈತೊಳೆದುಕೊಂಡಿದ್ದು ಕಲಾವಿದರ ಒಂದು ನಿಯೋಗ ಮಾರ್ಚ್ ಅಂತ್ಯದಲ್ಲಿ ಮಾನ್ಯ ಸಚಿವರನ್ನು ಕಂಡು ವಿನಂತಿಸಿದಾಗ ಜೂನ್ ನಲ್ಲಿ ಪೂರ್ಣ ಅನುದಾನ ನೀಡುವುದಾಗಿ ಮೌಖಿಕವಾಗಿ ಹೇಳಿದ ಸಚಿವರು ಇಂದಿಗೂ ಜುಲೈ ಅಂತ್ಯದವರೆಗೂ ಆ ಕುರಿತು ಯಾವುದೇ ಪ್ರಯತ್ನ ನಡೆಸಿಲ್ಲ ಕಲಾವಿದರ ಕುಂದು ಕೊರತೆಗಳ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರು.
ಕಲಾವಿದರೊಂದಿಗೆ ಚರ್ಚೆಯನ್ನು ಇಂದಿಗೂ ಮಾಡಿಲ್ಲ ಕಲಾವಿದರ ಪ್ರಾಯೋಜಿತ ಹಣ 2019 ರಿಂದಲೂ ಬಾಕಿ ಇದ್ದ ನೀಡುವ ಕುರಿತು ಇದುವರೆಗೆ ಯಾವುದೇ ಕ್ರಮ ವಹಿಸಿಲ್ಲ ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿದ ಸಂಘ ಸಂಸ್ಥೆಗಳಿಗೆ ಕಾಟಾಚಾರ ಎಂಬಂತೆ 30% ಅಂಡ್40% ಹಣ ಬಿಡುಗಡೆ ಮಾಡಿ ಸಚಿವರ ಶಿಪಾರಸ್ಸು ಪಡೆದ ಕೆಲ ಸಂಘ ಸಂಸ್ಥೆಗಳಿಗೆ ಪೂರ್ತಿ ಧನ ಸಹಾಯವನ್ನು ನೀಡುತ್ತಿದ್ದಾರೆ.
ಇದು ಕಾನೂನು ವಿರೋಧ ಮತ್ತು ನಿಯಮ ಉಲ್ಲಂಘನೆ
ಕಳೆದ ಹತ್ತು ವರ್ಷಗಳಿಂದಲೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಜಂಟಿ ನಿರ್ದೇಶಕರನ್ನ ಬದಲಾವಣೆ ಮಾಡದೆ ಅವರನ್ನು ಅಲ್ಲೇ ಮುಂದುವರಿಸಿರುವುದು ಕಲಾವಿದರಿಗೆ ತೊಂದರೆಯಾಗಿದೆ.
ಜಂಟಿ ನಿರ್ದೇಶಕರ ಆಡಳಿತ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿರುವುದು ಅವರ ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದರು ಸಚಿವರು ನಿರ್ಲಕ್ಷ ಎದ್ದು ಕಾಣುತ್ತಿದೆ.
ಬೆಂಗಳೂರು ಹಬ್ಬದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರವನ್ನು SIT ತನಿಖೆಗೆ ವಹಿಸಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು
ಈ ಕುರಿತು ಈಗಾಗಲೇ ದಿನಾಂಕ 19.7.2024 ರಂದು ಚರ್ಚೆ ನಡೆದಿದ್ದು ಅಂದು ಮಾನ್ಯ ನಿರ್ದೇಶಕರ ಗಮನಕ್ಕೆ ತಂದಿದ್ದೇವೆ ಅದಾಗ್ಯೂ ಶೀಘ್ರವಾಗಿ ಧನಸಹಾಯ ಮಂಜೂರು ಮಾಡಲು ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡಲು ಮುಂದಿನ 2024 -25 ನೇ ಸಾಲಿನ ಅರ್ಜಿ ಕರೆಯಲು ಇಲಾಖೆಯ ಜಂಟಿ ನಿರ್ದೇಶಕರ ಕರ್ತವ್ಯ ಲೋಪದಿಂದಾಗಿ ಅನೇಕ ಕಾರ್ಯಕ್ರಮಗಳ ಯೋಜನೆಗಳನ್ನು ಪುನರಾರಂಭ ಮಾಡಲು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಕುರಿತು 25.7.2024ನೇ ಗುರುವಾರ ಬೆಳಿಗ್ಗೆ 11:30 ಕ್ಕೆ ಎಲ್ಲರೂ ಸೇರಿ ಚರ್ಚೆ ನಡೆಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಶಾಂತಿಯುತ ಸಾಂಸ್ಕೃತಿಕ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಲಾಗಿದೆ ಅಂದು ಕನ್ನಡ ಭವನ ಎದುರು ಬಂದು ಶಾಂತಿಯುತ ಮೌನ ಪ್ರತಿಭಟನೆ ಕಪ್ಪುಪಟ್ಟಿಯೊಂದಿಗೆ ಪ್ಲೇ ಕಾರ್ಡ್ಸ್ ಪ್ರದರ್ಶನ ಹಮ್ಮಿಕೊಳ್ಳುವುದು ಎಂದು ಸಾಂಸ್ಕೃತಿಕ ಸಂಘಟಕರಾದ ಜಯಸಿಂಹ ಎಸ್ ಚೆಕ್ಕೆರೆ ಲೋಕೇಶ, ಸಬ್ಬನಹಳ್ಳಿ, ರಾಜು, ಅಂಜನಪ್ಪ, ನಾಗೇಶ್ ಕೆ ಎನ್, ಮಹೇಶ್ ಬಾಬು ಸುರ್ವೆ, ರಾಜೇಗೌಡ ತಮಟೆ, ನಾಗರಾಜ್ ಕುಂತೂರು, ಕುಮಾರ್ ಕುಣಿಗಲ್, ರಾಮಚಂದ್ರ, ಬಸವರಾಜ್ ಸಿನ್ನೂರು, ಚಂದ್ರಿಕಾ ತುಮಕೂರು ಇತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.