6

ಶ್ರಾವಣ ಮಾಸದ ನಿಮಿತ್ಯ ವಚನಗಳ ನಡಿಗೆ ಮನ ಮನೆಗಳ ಕಡೆಗೆ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 23- ಮನುಷ್ಯನ ಮನುಕುಲದಲ್ಲಿದ್ದ ಸಂಕುಚಿತ ಮನೋಭಾವನೆ ಹೋಗಲಾಡಿಸಿ ಹೃದಯ ವೈಶಾಲ್ಯತೆಯನ್ನು ಬೆಳೆಸಿದವರು ವಚನಕಾರರು ಎಂದು ಮರಕಟ್ ಗ್ರಾಮದ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಮರಕಟ್ ಗ್ರಾಮದಲ್ಲಿ ವಚನಗಳ ನಡಿಗೆ ಮನ ಮನೆಗಳ ಕಡೆ ಪಾರ್ವತೇಮ್ಮ ನೀಲಕಂಠಪ್ಪ ಬಳ್ಳಾರಿ ರವರ ಮನೆಯಲ್ಲಿ ಅಯೋಜಿಸಿದ್ದ ಸಾಮೂಹಿಕ ವಚನ ಪ್ರಾರ್ಥನೆ ಕಾರ್ಯಕ್ರಮ ಉದ್ದೇಶಿ‌ಸಿ ಮಾತನಾಡಿದ ಅವರು ವಚನಗಳ ನಡಿಗೆ ಮನ ಮನೆ ಕಡಗೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರಾವಣ ಮಾಸ ಪ್ರಾರಂಭ ದಿಂದಲು ಪ್ರತಿ ದಿನ ಮನೆ ಮನೆಯಲ್ಲಿ ವಚನಗಳ‌ ಚಿಂತನೆ ಮಾಡುತ್ತಾ ಶ್ರಾವಣ ಮಾಸವನ್ನ ಆಚರಣೆ ಮಾಡುತ್ತಾ ಬಂದಿದ್ದೆವೆಂದು ಹೇಳಿದರು.

ಮಕ್ಕಳ್ಳಿಯ ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿ ಮಾತನಾಡಿ ಆಧುನಿಕ ಪ್ರಪಂಚದಲ್ಲಿ ಸಂಸ್ಕಾರ ಎಂಬುದು ಮರೀಚಿಕೆಯಾಗಿದೆ ಆದರೆ ವಚನಗಳು ಅಂತಹ ಸಂಸ್ಕಾರ ಮೂಡಿಸಲು ಸಹಕಾರಿಯಾಗಿದ್ದು, ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಸಮಾನತೆಯ ದ್ಯೋತಕವಾದ ವಚನಗಳನ್ನು ಪ್ರಚುರಪಡಿಸಿ ವಿಶ್ವಮಾನವರಾಗಲು ಅಣಿಗೊಳಿಸುತ್ತಿರುವುದು ಶ್ಲಾಘನೀಯ. ಬಸವಣ್ಣನವರ ಅಸ್ಪೃಶ್ಯತೆ ನಿವಾರಣೆ ಅವರ ಕಸಸಾಗಿತ್ತು ಇಂದು ನಾವು ವಚನಕಾರರನ್ನು ಪೂಜೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಅವರ ವಚನಗಳ ಬಗ್ಗೆ ವಿಚಾರ ಸಂಕಿರಣ, ಚರ್ಚೆ ಮುಂತಾದ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ಅವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.ಕಾಯಕದಿಂದ ಜೀವನ ಸಾಗಿಸುವ ಪ್ರವೃತ್ತಿ ಮಕ್ಕಳಲ್ಲಿ ಮೈಗೂಡಿದ್ದೇ ಆದರೆ ಸದೃಢ ಸಮಾಜ ನಿರ್ಮಾಣ ಮಾಡಲ ಸಾಧ್ಯ ಎಂದರು.

ಪ್ರತಿಯೊಬ್ಬರ ಜೀವನವೂ ಸಾರ್ಥಕತೆಯ ಹಾದಿಯಲ್ಲಿ ರೂಪುಗೊಳ್ಳಬೇಕಾದರೆ ವಚನಕಾರರ ಜೀವನವೇ ನೈಜ ಉದಾಹರಣೆಯಾಗಿದೆ. ಬಡವ, ಬಲ್ಲಿದ, ಮೇಲು, ಕೀಳು ಎಂಬ ಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಂಡು ವಿಚಾರ ಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯ ಎಲ್ಲಾ ಕಾಲಘಟ್ಟದಲ್ಲೂ ಅನ್ವಯವಾಗುತ್ತದೆ ಎಂದರು.

ವಚನ ಸಾಹಿತ್ಯ ಯುವ ಪಿಳಿಗೆಗೆ ಮನವರಿಕೆ ಮಾಡಿಕೊಡ ಬೇಕು ಅದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪಂಪನಗೌಡ ಮಾಲಿ ಪಾಟೀಲ್, ತಾಲೂಕ ಪಂಚಾಯತ ಮಾಜಿ ಸದಸ್ಯ ಷಣ್ಮುಖಪ್ಪ ಬಳ್ಳಾರಿ, ಹನಮೇಶ ಗೌಡ್ರ, ಶರಣಪ್ಪ ಬಳ್ಳಾರಿ, ಸಂಗಪ್ಪ ಲಂಡಿ, ಶರಣಪ್ಪ ಮೇಟಿ, ಶರಣಪ್ಪ ಮುಸಲಾಪೂರ, ಮಾಹಲಿಂಗಪ್ಪ ಮೇಟಿ, ಹನಮಂತಪ್ಪ ಮೇಟಿ, ಹೇಮಣ್ಣ ಬಳ್ಳಾರಿ, ದೊಡ್ಡನಗೌಡ ಗೌಡ್ರ, ಖಾದರ್ ಸಾಬ, ಫೀರಸಾಬ ಮುಲ್ಲಾರ, ಮಲ್ಲಫ್ಪ ಬಳ್ಳಾರಿ, ಆದನಗೌಡ ಮಾಲಿ ಪಾಟೀಲ್, ತಿರುಪತಿ ಮುಸಲಾಪೂರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!