
ಭತ್ತ ಖರೀದಿ ಕೇಂದ್ರ ತೆರೆಯುವಂತೆ ಸಂಯುಕ್ತ ಕಿಸಾನ್ ಹೋರಾಟ ಸಮಿತಿಯಿಂದ ಮನವಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 8- ಇತ್ತೀಚೆಗೆ ಭತ್ತ ಕಟಾವು ಪ್ರಾರಂಭವಾಗಿದೆ ರೈತರಿಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ ಸುರಿದ ಭಾರೀ ಮಳೆ ಗಾಳಿಗೆ ಭತ್ತ ನೆಲಕ್ಕೆ ಬಿದ್ದು ರೈತರು ತುಂಬಾ ನಷ್ಟಕ್ಕೆ ಒಳಗಾಗಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖರೀದಿ ಕೇಂದ್ರ ಇದುವರೆಗೂ ತೆಗೆದಿರುವುದಿಲ್ಲ ಇಷ್ಟೆಲ್ಲಾ ಗೊತ್ತಿದ್ದರೂ ಕೂಡ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಸಿರುಗುಪ್ಪ ತಾಲೂಕಿನಲ್ಲಿ ೩೭ ಸಾವಿರ ಹೆಕ್ಟೇರ್ ಭತ್ತ ನಾಟಿ ಯಾಗಿರುತ್ತದೆ ಸಂಬAಧಿಸಿದವರು ಕುರುಡು ಜಾಣ್ಮೆಯನ್ನು ತೋರುತ್ತಿದ್ದಾರೆ ಎಂದು ಸಿರುಗುಪ್ಪ ತಾಲೂಕು ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟ ಸಮಿತಿ ತಾಲೂಕ ಕಚೇರಿಗೆ ತೆರಳಿ ಗ್ರೇಡ್- ೨ ತಹಶೀಲ್ದಾರ್ ಕುಮಾರಿ ಸತ್ಯನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತರ ಪರಿಸ್ಥಿತಿ ಗೋಳು ಕೇಳುವವರು ಯಾರು? ಸಿರುಗುಪ್ಪ ತಾಲೂಕಿನಲ್ಲಿ ಒಂದು ಕ್ವಿಂಟಲ್ ಭತ್ತಕ್ಕೆ ಗುಣಮಟ್ಟ ಆಧಾರದ ಮೇಲೆ ೧೭೦೦ ರೂಪಾಯಿನಿಂದ ೧೯೦೦ ರೂಪಾಯಿಗಳ ವರೆಗೆ ಖರೀದಿ ಮಾಡುತ್ತಿದ್ದಾರೆ.
ಸಿರುಗುಪ್ಪ ತಾಲೂಕ ಪಕ್ಕದ ತಾಲೂಕಗಳಾದ ಗಂಗಾವತಿ ಸಿಂಧನೂರು ನಗರಗಳಲ್ಲಿ ೨೨೦೦ರೂಪಾಯಿನಿಂದ ೨೩೦೦ರೂಪಾಯಿಗಳ ವರೆಗೆ ಖರೀದಿ ಮಾಡುತ್ತಿದ್ದಾರೆ ಆದಕಾರಣ ತಾವುಗಳು ರೈಸ್ ಮಿಲ್ ಮಾಲೀಕರ ಸಭೆ ನಡೆಸಿ ಈ ವ್ಯತ್ಯಾಸವನ್ನು ಸರಿಪಡಿಸಿಕೊಂಡು ಭತ್ತ ಖರೀದಿ ಮಾಡಲು ಸೂಚಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕೂಡಲೇ ಕ್ರಮ ವಹಿಸಬೇಕು ಅಥವಾ ತಕ್ಷಣವೇ ಎಪಿಎಂಸಿ ನಲ್ಲಿ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಸಂಯುಕ್ತ ಕಿಸಾನ್ ಹೋರಾಟಗಾರರು ಆಗ್ರಹಿಸಿದರು.
ಇನ್ನು ನಾಲ್ಕೈದು ದಿನಗಳಲ್ಲಿ ಈ ವ್ಯತ್ಯಾಸವನ್ನು ಸರಿಪಡಿಸದಿದ್ದಲ್ಲಿ ಅನಿರ್ದಿಷ್ಟ ಉಗ್ರ ಹೋರಾಟ ಮಾಡಲಾಗುವುದು ಎಂದು ತಾಲೂಕು ಅಧ್ಯಕ್ಷ ಹುಲುಗಯ್ಯ ಗೊರವರ, ಶ್ರೀನಿವಾಸ್, ಸಿದ್ದರಾಮನಗೌಡ, ಹೆಚ್.ತಿಪ್ಪಯ್ಯ, ವೀರೇಶ, ಪರಸಪ್ಪ ಪೂಜಾರಿ, ಬಸಪ್ಪ, ರುದ್ರಮ್ಮ, ಈರಮ್ಮ, ಪದಾಧಿಕಾರಿಗಳ ಸಮ್ಮುಖದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.