
ಹೊಲದಲ್ಲಿ ವಿಷಕಾರಿ ಅಣಬೆ ತಿಂದು ಐವರು ಅಸ್ವಸ್ಥ
ಕುಷ್ಟಗಿ: ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ಹೊಲದಲ್ಲಿ ಕೂಲಿ ಕೆಲಸಕ್ಕೆಂದು ಹೋದ ಕಾರ್ಮಿಕರು ಅಲ್ಲೆ ಸ್ಥಳದಲ್ಲಿದ್ದ ವಿಷಕಾರಿ ಅಣಬೆ(ಆಳಿಂಬೆ) ತಿಂದು ಅಸ್ವಸ್ಥಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ಶುಕ್ರವಾರದಂದು ಜರುಗಿದೆ. ಕೂಲಿಕಾರ್ಮಿಕರಾದ ಗಂಗವ್ವ ಕುರಿ(೨೫), ಶಿಲ್ಪಾ ಜೌತೆದಾರ್(೩೪), ಶಿವಮ್ಮ ಗುಂಡಿಹಿಂದಲ್(೨೦), ಅಕ್ಕಮ್ಮ ಔತೆದಾರ(೩೦), ಸೋಮವ್ವ ದೋಟಿಹಾಳ(೨೮), ಗಂಗವ್ವ ಕುರಿ(೨೫) ಎನ್ನುವವರು ಶಾಖಾಪೂರ ಗ್ರಾಮದ ಮುತ್ತನಗೌಡ ಪೊಲೀಸ್‌ಪಾಟೀಲ್ ಎಂಬುವವರ ಹೊಲದಲ್ಲಿ ಕೂಲಿ ಕೆಲಸ ಮಾಡುವಾಗ ಕಾಣಿಸಿಕೊಂಡ ವಿಷಕಾರ ಅಣಬೆ(ಆಳೆಂಬೆ) ತಿಂದು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಐವರನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಸಾರ್ವಜನಿಕ ಮಾಹಿತಿಯಿಂದ ತಿಳಿದು ಬಂದಿದೆ..