
ಅರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಚಿಕಿತ್ಸೆ ಸಿಗದ ಕಾರಣ ಯುವಕ ಸಾವು
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 6- ಚಿಕಿತ್ಸೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದಾಗ ವೈದ್ಯರಿಲ್ಲದೆ ಚಿಕಿತ್ಸೆ ಸಿಗದಿದ್ದ ಕಾರಣ ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದ್ದು ಪಟ್ಟಣದ ಸಮುದಾಯ ಆರೋಗ್ಯಕೇಂದ್ರದ ಬಳಿ ಕೆಲಕಾಲ ಉದ್ವಿಗ್ನವಾತವರಣ ಸೃಷ್ಟಿಯಾಗಿತ್ತು.
ಪಟ್ಟಣದ 11ನೇವಾರ್ಡಿನ ನಾಲಬಂದಿಸಲೀಂ (30) ಎನ್ನುವ ಯುವಕನಿಗೆ ಧಡೀರನೆ ಆರೋಗ್ಯದಲ್ಲಾದ ವ್ಯತ್ಯಾಸದಿಂದ ಸಮುದಾಯ ಆರೋಗ್ಯಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದವೇಳೆ, ಕೇಂದ್ರದಲ್ಲಿ ವೈದ್ಯರಿಲ್ಲದೆ ಆಸ್ಪತ್ರೆಗೆ ಆಗಮಿಸಿ ಅರ್ಧ ಗಂಟೆವಾದ್ರು ಚಿಕಿತ್ಸೆ ಲಭ್ಯವಾಗಿಲ್ಲ, ಯುವಕನಿಗೆ ಸೂಕ್ತ ಚಿಕಿತ್ಸೆ ಸಿಗದೆ, ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆಗೆ 108ಮೂಲಕ ಸಾಗಿಸುವ ವೇಳೆ ಮಾರ್ಗದ ಮದ್ಯೆ ಸಾವನ್ನಪ್ಪಿದ್ದಾರೆ.
ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಸಂಭಂದಿಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಸಮುದಾಯ ಆರೋಗ್ಯ ಕೇಂದ್ರದಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ವೈದ್ಯರ ನಿರ್ಲಕ್ಷ್ಯದ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು.
ವಿಷಯ ತಿಳಿಯುತ್ತಿದ್ದಂತೆ ಶಾಸಕ ನೇಮಿರಾಜ್ ನಾಯ್ಕ್ ಮತ್ತು ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಈ ಸಂಧರ್ಭದಲ್ಲಿ ಶಾಸಕ ನೇಮಿರಾಜನಾಯ್ಕ್ ಮಾತನಾಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದ ನನ್ನ ಹುಟ್ಟೂರಲ್ಲಿ ವೈದ್ಯರಿಲ್ಲದೇ ಹೋದರೆ ನನಗೆ ಮುಜುಗರ ತರುವಂಥದ್ದು, ಸಮುದಾಯ ಆರೋಗ್ಯಕೇಂದ್ರಕ್ಕೆ ಸಿಬ್ಬಂದ್ದಿಗಳನ್ನು ನೇಮಿಸದೆ, ಕಟ್ಟಡವನ್ನು ತರಾತುರಿಯಲ್ಲಿ ಉದ್ಘಾಟಿಸಿ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ, ಕೂಡಲೇ ಈ ಕೇಂದ್ರಕ್ಕೆ ಮೂವರು ಎಂ.ಬಿ.ಬಿ.ಎಸ್.ವೈದ್ಯರನ್ನು ಈ ಕ್ಷಣದಿಂದಲೇ ನೇಮಿಸಲು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇರುವ ವೈದ್ಯರಾದ ಡಾ. ಮಂಜುಳಾ ಅವರಿಗೆ ನೀಡಿದ್ದ ಹೆಚ್ಚಿನ ಜವಾಬ್ದಾರಿ ಆಡಳಿತ ಕಾರ್ಯದಿಂದ ಮುಕ್ತಗೊಳಿಸಿ ಕೇವಲ ಚಿಕಿತ್ಸೆನೀಡಲು ಜವಾಬ್ದಾರಿ ವಹಿಸಲಾಗಿದೆ, ಸಮಯಕ್ಕೆ ಸರಿಯಾಗಿ ಆರೋಗ್ಯ ಕೇಂದ್ರಕ್ಕೆ ಹಾಜರಾಗಲು ಕಟ್ಟುನಿಟ್ಟಾಗಿ ಸೂಚಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡ ನಡೆಯದಹಾಗೆ ಕ್ರಮವಹಿಸಲು ತಿಸಿಳಿದ್ದೇವೆ ಎಂದರು.
ಆಸ್ಪತ್ರೆಯಲ್ಲಿ ಇದಕ್ಕೂ ಮುಂಚೆ 4 ರಿಂದ 5 ಪ್ರಕರಣಗಳು ನಡೆದಿವೆ ಆಸ್ಪತ್ರೆಯಲ್ಲಿ ವೈದ್ಯರು ಯಾವಾಗಲೂ ಇರೋದಿಲ್ಲ, ಇದ್ದರೂ ರೋಗಿಗಳನ್ನು ಮುಟ್ಟಿಯೂ ನೋಡುವುದಿಲ್ಲ ಎಂದು ಡಾ. ಮಂಜುಳಾ ಅವರಮೇಲೆ ಸ್ಥಳೀಯರು ಗಂಭೀರವಾಗಿ ಆರೋಪಿಸಿ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಪ್ರಥಮ ಚಿಕಿತ್ಸೆ ಕೂಡ ಕೇಂದ್ರದಲ್ಲಿ ಲಭಿಸುತ್ತಿಲ್ಲ ಎಂದು ದೂರಿದರು.
ಹಗರಿಬೊಮ್ಮನ ಹಳ್ಳಿ ಶಾಸಕ ನೇಮಿರಾಜನಾಯ್ಕ್, ಹೊಸಪೇಟೆ ತಹಶಿಲ್ದಾರ ಶೃತಿ ಎಂ.ಮಳ್ಳಪ್ಪ ಗೌಡ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಂಕರನಾಯ್ಕ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸಲೀಂಪಾಷ, ತಾಲೂಕು ವೈದ್ಯಧಿಕಾರಿ ಭಾಸ್ಕರ್ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಪಿಎಸ್ ಐ ಮೌನೇಶ್ ರಾಥೋಡ್, ಕಂದಾಯ ಇಲಾಖೆಯ ಅಂದಾನ ಗೌಡ ಇತರರಿದ್ದರು.