8

ಆಧಾರ್ ಕಾರ್ಡ್ ನಾಗರಿಕರ ಅವಿಭಾಜ್ಯ ಅಂಗವಾಗಿದೆ : ಎಂ.ಎಸ್.ದಿವಾಕರ್

ಕರುನಾಡ ಬೆಳಗು ಸುದ್ದಿ

ವಿಜಯನಗರ, 8- ದೇಶದ ನಾಗರಿಕರಿಗೆ ಈಗಿನ ದಿನಗಳಲ್ಲಿ ಆಧಾರ್ ಕಾರ್ಡ್ ಗುರುತಿಸುವಿಕೆಯ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೇಳಿದರು.

ವಿಜಯನಗರ ಜಿಲ್ಲಾಡಳಿತ, ಇ-ಆಡಳಿತ ಕೇಂದ್ರ ಹಾಗೂ ಆಧಾರ್ ವಿಶಿಷ್ಟ ಗುರುತಿನ ಪ್ರಾಧಿಕಾರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನವಂಬರ್ ೮ ರಂದು ನಡೆದ ಆಧಾರ್ ಪುನಶ್ಚೇತನ ತರಬೇರಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆಧಾರ್ ಕಾರ್ಡ್ ಬಂದ ಮೊದಲ ದಿನಗಳಲ್ಲಿ ಅದರ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ಗೊಂದಲಗಳು ಮತ್ತು ಅನೇಕ ಚರ್ಚೆಗಳಿಗೆ ಗ್ರಾಸವಾಗಿತ್ತು. ಆದರೆ, ಈಗ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಆಧಾರ್ ಒಂದು ವಿಶಿಷ್ಟಿ ಗುರುತಿಸನ ದಾಖಲೆಯಾಗಿ ಬೆಳೆದಿದೆ. ಯಾವುದೇ ಒಂದು ಸಿಮ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಆಧಾರ್ ಕರ್ಡ್ ಬೇಕಾಗುತ್ತದೆ. ಸಿಮ್ ಕಾರ್ಡ್ಗಳಿಗೆ ಆಧಾರ್ ಜೋಡನೆ ಮಾಡಿರುವುದರಿಂದ ಸಾಕುಷ್ಟು ಅಪರಾಧಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಿದರು.

ಆಧಾರ್ ಕಾರ್ಡ್ ಭಾರತದ ನಾಗರಿಕನ ಜೀವನದ ದಾಖಲೆಗಳಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಆದರೆ, ಜಿಲ್ಲೆಯಲ್ಲಿ ಈಗಲು ಕೆಲವೊಬ್ಬರು ಆಧಾರ್ ಕಾರ್ಡ್ ಮಾಡಿಸಿಕೊಂಡಿಲ್ಲ. ಅವರಿಗೆ ಆಧಾರ್ ಕಾರ್ಡ್ನ ಪ್ರಾಮುಖ್ಯತೆ ತಿಳಿಸಿ, ಶೇ.೧೦೦ ರಷ್ಟು ಜನ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಹಾಗೆ ಮಾಡಬೇಕಾಗಿದೆ ಎಂದರು.

ಸರ್ಕಾರದ ಕಚೇರಿಗಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಬರುವವರ ಹತ್ತಿರ ಸಬ್ಯತೆಯಿಂದ ವರ್ತಿಸಿ, ಪ್ರತಿ ಸಣ್ಣ ದಾಖಲೆಗಳಿಗೆ ಅವರನ್ನು ವಾರಗಟ್ಟಲೆ ಅಲೆದಾಡದಂತೆ ಮಾಡಬಾರದು, ನಮ್ಮಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಆಧಾರ್ ನೋಂದಣಿ ಅಪರೇಟರ್‌ಗಳಿಗೆ ಸೂಚಿಸಿದರು.

ಶಿಬಿರದ ವಿಷಯಗಳು : ಆಧಾರ್ ಪುನಶ್ಚೇತನ ತರಬೇತಿ ಶಿಬಿರದಲ್ಲಿ ಆಧಾರ್ ನೋಂದಣಿ ಅಪರೇಟರ್‌ಗಳಿಗೆ ಹೊಸದಾಗಿ ನವೀರಿಸಿದ ತಂತ್ರಾಶದ ಬಗ್ಗೆ, ನವೀಕರಿಸಿದ ತಂತ್ರಾAಶದಲ್ಲಿ ಹಾಗೂ ಹಿಂದಿನ ತಂತ್ರಾAಶದಲ್ಲಿ ಇರುವಂತಹ ಗೊಂದಲಗಳ ನಿವಾರಣೆ ಬಗ್ಗೆ, ಹೊಸದಾಗಿ ಆಧಾರ್ ಮಾಡಿಸಲು ಹಾಗೂ ನವೀಕರಿಸಲು ಬೇಕಾಗುವ ದಾಖಲೆಗಳ ಬಗ್ಗೆ, ಆಧಾರ್ ಮಾಡಿಸಲು ಯಾವೆಲ್ಲ ದಾಖಲೆಗಳು ಪೂರಕವಾಗಿ ಬೇಕಾಗುತ್ತವೆ. ಮತ್ತು ಆಧಾರ್ ಕಾರ್ಡ್ ಮಾಡಿಸಲು ಬರುವ ಸಾರ್ವಜನಿಕರ ಹತ್ತಿರ ಯಾವ ರೀತಿಯಲ್ಲಿ ವರ್ತಿಸಬೇಕು ಎಂದು ತಿಳಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ, ವಿಜಯನಗರ ಹಾಗೂ ಬಳ್ಳಾರಿ ಅಂಚೆ ಕಚೇರಿಯ ಹಿರಿಯ ಅಧೀಕ್ಷರಾದ ಚಿದಾನಂದ ಪಿ., ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ, ಹೊಸಪೇಟೆ ತಹಶೀಲ್ದಾರ್ ಮೇಗ ಮತ್ತು ವಿವಿಧ ಅಧಿಕಾರಿಗಳು ಹಾಗೂ ಆಧಾರ್ ನೋಂದಣಿ ಅಪರೇಟರ್‌ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!