
ಜನರ ಸಮಸ್ಯೆ ಆಲಿಸಲು ಅಭಯ ಹಸ್ತ : ಸಚಿವ ತಂಗಡಗಿ
ಕರುನಾಡ ಬೆಳಗು ಸುದ್ದಿ
ಗ0ಗಾವತಿ, 8- ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ತ್ವರಿತವಾಗಿ ಸಮಸ್ಯೆ ಬಗೆಹರಿಸಲು ಅಭಯಹಸ್ತ ಕಾರ್ಯಕ್ರಮ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ ಕೊಪ್ಪಳ, ತಾಲೂಕು ಪಂಚಾಯತ್ ವತಿಯಿಂದ ಆಯೋಜಿಸಿದ್ದ ಅಭಯಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಕ್ಕಜಂತಕಲ್ ಗ್ರಾಮವನ್ನು ಮರೆಯೋದಿಲ್ಲ.ನನ್ನನು ಶಾಸಕನಾಗಿ ಮಂತ್ರಿಯಾಗಲು ಲಿಡ್ ಕೋಟ್ಟ ಗ್ರಾಮವಾಗಿದೆ. ಕಂಪ್ಲಿ ಗಂಗಾವತಿ ನದಿ ಸೇತುವೆ ನಿರ್ಮಾಣಕ್ಕಾಗಿ 16 ಕೋಟಿ ಪ್ರಸ್ತಾವನೆ ಮಂಜೂರಾತಿಗೆ ಕೋಪ್ಪಳ,ಬಳ್ಳಾರಿ ಜನಪ್ರತಿನಿಧಿಗಳು ಸೇರಿ ಒಪ್ಪಿಗೆ ಸೂಚಿಸಲಾಗಿದೆ. ಕೋತಿಗಳ ಹಿಡಿಯಲು-ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಜಿಪಂ ಸಿಓರವರಿಗೆ ಅನುದಾನಕ್ಕಾಗಿ ಸೂಚಿಸಿದರು.
ವಿನೋಬ ನಗರ ಅನೇಕ ವರ್ಷಗಳಿಂದ ವಾಸಿಸುವ ಎಲ್ಲರಿಗೂ ಹಕ್ಕುಪತ್ರ ನೀಡಲು ಬೂಮಾಲಿಕರೋಂದಿಗೆ ಚರ್ಚಿಸಿ ಈಗಾಗಲೇ ಸಾಮಾಜಿಕ ಕಾರ್ಯಕರ್ತ ಚಿಕ್ಕಜಂತಕಲ್ ಸೈಯದ ಅಲಿ ಸಭೆಯಲ್ಲಿಯೇ ಅವರ ಸಂಭದಿಕರೆಲ್ಲರ ಒಪ್ಪಿಗೆ ವಿನೋಬನಗರ ಹಕ್ಕು ಮಾಡಲು ಸಹಕರಿಸುವ ದಾಗಿ ತಿಳಿಸಿದ್ದಾರೆ.
ತಾಲೂಕು ಅಧಿಕಾರಿಗಳು ಇರ್ತಾರೆ, ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಮಾಡಿಕೊಳ್ಳಲು ಸಹಕಾರಿಯಾಗಿದೆ. ಕಾನೂನು ತೊಡಕು ಇರುವ ಸಮಸ್ಯೆಗಳ ಬಗೆಹರಿಸಲು ಸ್ವಲ್ಪ ಸಮಯಾವಕಾಶ ಹಿಡಿಯುತ್ತದೆ ಎಂದರು.
ವಿದ್ಯಾರ್ಥಿಗಳ ಬಸ್ ಸಮಸ್ಯೆ, ರಸ್ತೆ ಸಮಸ್ಯೆ, ಪಡಿತರ ವಿತರಣೆ ಸಮಸ್ಯೆ, ಚರಂಡಿ ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲೇ ಬಗೆಹರಿಸಿದರು. ಬಸ್ ಸಮಸ್ಯೆ ಕುರಿತು ಸಚಿವರು ಕೆಎಸ್ ಆರ್ ಟಿಸಿ ಮೇಲಧಿಕಾರಿಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಚಿಕ್ಕಜಂತಕಲ್ ಗ್ರಾಮದಲ್ಲಿ ಬಸ್ ನಿಲುಗಡೆಗೆ ಕ್ರಮವಹಿಸುವಂತೆ ಸೂಚಿಸಿದರು.
ತಾಲೂಕಿನ ಚಿಕ್ಕಜಂತಗಲ್ ಗ್ರಾಪಂ ವ್ಯಾಪ್ತಿಯ ಹಳೇ ಅಯೋಧ್ಯ, ಹೊಸ ಅಯೋಧ್ಯ ಹಾಗೂ ಚಿಕ್ಕಜಂತಕಲ್ ಗ್ರಾಮದಲ್ಲಿ ಅಭಯಹಸ್ತ ಕಾರ್ಯಕ್ರಮ ನಡೆದವು.
ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯರಾದ ಅಮರೇಶ ಗೋನಾಳ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಗ್ರಾಪಂ ಅಧ್ಯಕ್ಷರಾದ ನೇತ್ರಾವತಿ ವೆಂಕೋಬ ಬಂಗಿ, ಉಪಾಧ್ಯಕ್ಷರಾದ ನಾಗಪ್ಪ ಬಲ್ಕುಂದಿ, ಗ್ರಾಪಂ ಪಿಡಿಓ ಮಲ್ಲಿಕಾರ್ಜುನ ಕಡಿವಾಳ, ಗ್ರಾಪಂ ಕಾರ್ಯದರ್ಶಿ ರವೀಂದ್ರ ಕುಲಕರ್ಣಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ವೆಂಕಟೇಶ ಬಾಬು, ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ಗ್ರಾಪಂ ಎಲ್ಲ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು ಭಾಗವಹಿಸಿದ್ದರು.