2c136fae-be38-4577-97e1-318669006cc9

ಗ್ರಾಮಸ್ಥರೊಂದಿಗೆ ಸಚಿವ ತಂಗಡಗಿ ಅವಾಚ್ಛ ಶಬ್ದಗಳ ನಿಂದನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 27- ಕನಕಗಿರಿ ತಾಲೂಕಿನ ಜಿರಾಳ ಗ್ರಾಮದಲ್ಲಿ ಗ್ರಾಮಕ್ಕೆ ಕಲ್ಪಿಸುವ ರಸ್ತೆಯನ್ನು ಮಾಡಿಕೊಡಿ ಎಂದು ಕೇಳಿದ್ದಕ್ಕೆ ಗ್ರಾಮಸ್ಥರೊಂದಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ಅವಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗಂಗಾವತಿ ಗ್ರಾಮೀಣ ಠಾಣೆಗೊಳಪಡುವ ಕನಕಗಿರಿ ವಿಧಾನಸಭಾ ಕ್ಷೇತ್ರದ ಕನಕಗಿರಿ ತಾಲ್ಲೂಕಿನ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಇದೀಗ ಈ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲು ಏರಿದೆ ಸಚಿವರ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಲು ಚಿಂತನೆ ನಡೆಸಿದ್ದಾರೆ.

ಘಟನೆಯ ವಿವರ : ಜೀರಾಳ ಕಲ್ಗುಡಿ ಗ್ರಾಮದ ಭೋವಿ ಕಾಲೋನಿಯಲ್ಲಿ ಭಾನುವಾರ ೧.೯೫ ಕೋಟಿ ರೂಪಾಯಿ ಮೊತ್ತದಲ್ಲಿ ಸಿಸಿ ರಸ್ತೆ, ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಸಚಿವ ತಂಗಡಗಿ ಆಗಮಿಸಿದ್ದರು.

ಭೂಮಿ ಪೂಜೆ ಮುಗಿದು ಸಚಿವ ಕಾರನ್ನೇರಿ ಹೊರಡಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕೆಲ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ರಸ್ತೆ ಮಾಡಿಕೊಡಿ ಎಂದು ಸಚಿವರ ಬಳಿ ಮನವಿ ಮಾಡಿಕೊಂಡರು.

ಚುನಾವಣೆ ಪರ್ವದಲ್ಲಿ ನೀಡಿದ ಭರವಸೆಯಂತೆ ರಸ್ತೆ ಮಾಡಿಕೊಡಿ ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಕೇವಲ ೨೦ ದಿನದಲ್ಲಿ ರಸ್ತೆ ಮಾಡಿಕೊಟ್ಟ ಬಳಿಕ ಗ್ರಾಮಕ್ಕೆ ಕಾಲಿಡುತ್ತೇನೆ ಎಂದು ಹೇಳಿದ್ದು ಮರೆತು ಹೋಗಿದೆಯಾ ಎಂದು ಸದಸ್ಯರೊಬ್ಬರು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.

ನಿಂದನೆಯ ವಿಡಿಯೋ ವೈರಲ್ : ಇದರಿಂದ ಕೆರಳಿದ ಸಚಿವ ತಂಗಡಗಿ, ಕಾರಿನಿಂದ ಇಳಿದು ಯಾವನ್ಲೆ ಅವನು ಬೋಸುಡಿಕೆ ಏನೇನು ಮಾತನಾಡುತ್ತಾನೆ? ಎಂದು ಕೆಲ ಅವಾಚ್ಯ ಶಬ್ದಗಳ ಪ್ರಯೋಗ ಮಾಡಿ ಸಾರ್ವಜನಿಕವಾಗಿಯೇ ನಿಂದಿಸಿದ್ದಾರೆ ಎನ್ನಲಾಗಿದ್ದು, ಇದೀಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.

ಅಲ್ಲದೇ ತಮ್ಮ ವಿರುದ್ಧ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪಂಚಾಯಿತಿ ಸದಸ್ಯ ಯಲ್ಲಪ್ಪ ಎಂಬುವವರ ಮೇಲೆ ಪ್ರಕರಣ ದಾಖಲಿಸುವಂತೆ ಸಚಿವ ಸೂಚನೆ ನೀಡಿದ ಹಿನ್ನೆಲೆ ಪೊಲೀಸರು, ಗ್ರಾಮದ ಕೆಲ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ಕೂಡಿಸಿದ್ದಾರೆ.
ಇದಕ್ಕೆ ಪ್ರತಿಕವಾಗಿ ಗ್ರಾಮದ ನೂರಾರು ಯುವಕರು, ಗ್ರಾಮಸ್ಥರು ಗ್ರಾಮೀಣ ಠಾಣೆಗೆ ಆಗಮಿಸಿದ್ದು, ಸಚಿವ ಶಿವರಾಜ ತಂಗಡಗಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!