ಮನೆ ಮಾಲೀಕರು ಮತ್ತು ಕಟ್ಟಡ ಕಾರ್ಮಿಕರ ಮಧ್ಯ ಪೂರಕವಾದ ಭಾವನೆಗಳಿರಬೇಕು
ನ್ಯಾಯಾಧೀಶ ಮಹಾಂತೇಶ ದರಗದ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 04- ಮನೆ ಮಾಲೀಕರು ಮತ್ತು ಕಟ್ಟಡ ಕಾರ್ಮಿಕರ ಮಧ್ಯ ಪೂರಕವಾದ ಭಾವನೆಗಳಿರಬೇಕು, ಇಬ್ಬರಲ್ಲೂ ಪಾಲನೆ ಮನನವಿರಬೇಕು ಆಗ ಮಾತ್ರ ಕೆಲಸಗಳು ಚೆನ್ನಾಗಿ ನಡೆಯುತ್ತವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಹಾಂತೇಶ ದರಗದ ಹೇಳಿದರು.
ಕೊಪ್ಪಳ ಜಿಲ್ಲೆಯ ನಿರ್ಮಿತಿ ಕೇಂದ್ರದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ಹಾಗೂ ತಾಲೂಕಾ/ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಮಿತಿ ಕೊಪ್ಪಳ ಇವರ ಸಹಯೋಗದಲ್ಲಿ ಬುಧವಾರ ನೂತನ ತಂತ್ರಾಂಶದ ಮೂಲಕ ಇ-ಕಾರ್ಡ್ ಜನರೇಷನ್, ನೋಂದಣಿ, ನವೀಕರಣ, ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಿಕೆ, ಎಸ್.ಎಸ್.ಪಿ. ಪೋರ್ಟಲ್ ಮೂಲಕ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಿಕೆ, ಮಂಡಳಿಯ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಮಹಾಂತೇಶ ದರಗದ ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಚಿ,ಗರಗ ಮಾತನಾಡಿ ಕಾರ್ಯಾಗಾರದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಯೋಜನೆಗಳ ಕೊಪ್ಪಳ ಜಿಲ್ಲೆಯ ಒಟ್ಟು 2,02,513 ಜನ ಕಟ್ಟಡ ಕಾರ್ಮಿಕ ಫಲಾನುಭವಿಗಳು ನೋಂದಣಿಯಾಗಿದ್ದಾರೆ, ಕಟ್ಟಡ ಕಾರ್ಮಿಕರಿಗೆ ಇಲ್ಲಿಯವರೆಗೂ ವಿವಿಧ ರೀತಿಯ ಸೌಲಭ್ಯಗಳ ಬಗೆಗೆ ಮದುವೆ ಧನಸಹಾಯ : 6226 ಜನ ಕಟ್ಟಡ ಕಾರ್ಮಿಕ ಫಲಾನುಭವಿಗಳು, ಒಟ್ಟು ಮೊತ್ತ ರೂ. 32,72,30,000=00, ಗಳಾಗಿದ್ದು, ಸಾಮಾನ್ಯ ವೈದ್ಯಕೀಯ : 13 ಜನ ಕಟ್ಟಡ ಕಾರ್ಮಿಕ ಫಲಾನುಭವಿಗಳು, ಒಟ್ಟು ಮೊತ್ತ ರೂ. 51,573=00 ಪ್ರಮುಖ ವೈದ್ಯಕೀಯ ಧನಸಹಾಯ : 285, ಜನ ಕಟ್ಟಡ ಕಾರ್ಮಿಕ ಫಲಾನುಭವಿಗಳು, ಒಟ್ಟು ಮೊತ್ತ ರೂ.70,54,524, ಹೆರಿಗೆ ಧನಸಹಾಯ : 1203 ಜನ ಕಟ್ಟಡ ಕಾರ್ಮಿಕ ಫಲಾನುಭವಿಗಳು, ಒಟ್ಟು ಮೊತ್ತ ರೂ. 3,45,62,000=00, ತಾಯಿ ಮಗು ಸಹಾಯ ಹಸ್ತ : 158 ಜನ ಕಟ್ಟಡ ಕಾರ್ಮಿಕ ಫಲಾನುಭವಿಗಳು, ಒಟ್ಟು ಮೊತ್ತ ರೂ. 9,48,000=00, ಗಳ ಸೌಲಭ್ಯಗಳನ್ನು ಪಡೆದಿರುತ್ತಾರೆ ಎಂದು ವಿವರಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ ಹೆಮಂತ್ ಸಿಂಗ್ ಮಾತನಾಡಿ ಇಲಾಖೆಯ ನೂತನ ತಂತ್ರಾಂಶದ ಮೂಲಕ ಇ-ಕಾರ್ಡ್ ಜನರೇಷನ್, ನೋಂದಣಿ, ನವೀಕರಣ, ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಿಕೆ, ಎಸ್.ಎಸ್.ಪಿ. ಪೋರ್ಟಲ್ ಮೂಲಕ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಿಕೆ, ಮಂಡಳಿಯ ವಿವಿಧ ಯೋಜನೆಗಳ ಬಗೆಗೆ ಗೋಡೆಯ ಸ್ಮಾರ್ಟ್ ಪರದೆಯ ಮೇಲೆ ಸವಿಸ್ತಾರವಾಗಿ ವಿವರಣೆ ನೀಡಿದರು.
ಕಾರ್ಯಗಾರದಲ್ಲಿ(ಪ್ರಭಾರ)ಕಾರ್ಮಿಕ ನಿರೀಕ್ಷಕರುಗಳಾದ ಶಿವಶಂಕರ ಬಿ. ತಳವಾರ, ಕುಷ್ಟಗಿ ಕಾರ್ಮಿಕ ನಿರೀಕ್ಷಕಿ ಕುಮಾರಿ ನಿವೇದಿತಾ, ಗಂಗಾವತಿ ಕಾರ್ಮಿಕ ನಿರೀಕ್ಷಕ ಅಶೋಕ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ ಪಾತ್ರೋಟಿ. ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎ.ಗಫಾರ್, ಸಂಜಯ್ ದಾಸ್ ಕೌಜಗೇರಿ, ರಾಮಲಿಂಗ ಶಾಸ್ತ್ರಿ ಮಠ, ಪೇಂಟರ್ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸೈಯ್ಯದ್ ನೂರುಲ್ಲಾ ಖಾದ್ರಿ, ಮುನಿರಾಬಾದ್ ಡ್ಯಾಮಿನ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಹಾಂಗೀರ್, ಚನ್ನಬಸಪ್ಪ ಗಾಳಿ,ಜಿಲ್ಲಾ ವೆಲ್ಡಿಂಗ್ ವರ್ಕ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ಸೈಯ್ಯದ್ ಅಫ್ಜಲ್ ಪಾಷಾ,
ಉಪಾಧ್ಯಕ್ಷ ,ನಯಿಮುರ್ ರಹೆಮಾನ್ ಗೌರಿಪುರ ಮುಂತಾದವರು ಭಾಗವಹಿಸಿದ್ದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ ಹೇಮಂತ್ ಸಿಂಗ್ ವಂದಿಸಿದರು