4

ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ಗೆ ಹೆಚ್ಚುವರಿ ಕೋರ್ಸ್ಗಳು : ಡಾ.ಶರಣಪ್ರಕಾಶ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 9- ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ಗೆ, ಸರ್ಕಾರಿ ಅನುದಾನದ ನೆರವಿನ ಅಡಿಯಲ್ಲಿ ಹೆಚ್ಚುವರಿ ಕರ‍್ಸ್ಗಳನ್ನು ಪ್ರಾರಂಭಿಸಲು ಸೂಕ್ತ ಸಹಕಾರ ನೀಡುವುದಾಗಿ ವೈದ್ಯಕೀಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಭರವಸೆ ನೀಡಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮತ್ತು ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಚೇರ್ಮೆನ್ ನಾಗಳ್ಳಿ ರಮೇಶ್ ಅವರು ಸಚಿವರ ಬೆಂಗಳೂರಿನ ಮನೆಯಲ್ಲಿ ಭೇಟಿ ಮಾಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜನಪ್ರಿಯ ಸೇವಾ ಕಾರ್ಯಗಳು ಮತ್ತು ಯುವಶಕ್ತಿಯನ್ನು ಆರ್ಥಿಕವಾಗಿ-ಸಮಾಜಿಕವಾಗಿ ಸಬಲರನ್ನಾಗಿ ರೂಪಿಸುವಲ್ಲಿ ಕೌಶಲ್ಯಾಭಿವೃದ್ಧಿ ಒದಗಿಸುತ್ತಿರುವುದನ್ನು ವಿವರಿಸಿ, ಸರ್ಕಾರದ ಅನುದಾನದಲ್ಲಿ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರು.

ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮತ್ತು ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಚೇರ್ಮೆನ್ ನಾಗಳ್ಳಿ ರಮೇಶ್ ಅವರ ಮನವಿಗೆ ಸ್ಪಂದಿಸಿ, ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ಮತ್ತು ಸ್ಥಳೀಯ ಯುವಸಮೂಹಕ್ಕೆ ಅಗತ್ಯವಿರುವ ಕೋರ್ಸ್ಗಳನ್ನು ಸಂಸ್ಥೆಗೆ ನೀಡಲು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!