6

ಅಗಣಿತ ದನುಮಾನ ಕಿರು ಚಿತ್ರದ ಶೀರ್ಷಿಕೆ ಬಿಡುಗಡೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 16- ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನಲ್ಲಿ ಪ್ರಜಾ ತರಂಗ ಕನ್ನಡ ಪತ್ರಿಕೆಯ ಸಂಪಾದಕ ಮೆಹಬೂಬ್ ಬಾಷಾ ಬಿದಿರಿ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಕಿರು ಚಿತ್ರಗಳು ಸಿನಿಮಾಗಳು ನಿರ್ಮಿಸಿ ಬಿಡುಗಡೆಗೊಳ್ಳುತ್ತಿರುವ ಮತ್ತು ಅವರ ಉತ್ಸಾಹ ಕಲೆ ನಟನೆ ರಾಜ್ಯಮಟ್ಟದಲ್ಲಿ ಯಶಸ್ವಿಗೊಳ್ಳಲಿ ಎಂದು ಬಸವ ಶ್ರೀ ಮಠದ ಬಸವಭೂಷಣ ಸ್ವಾಮೀಜಿ ಆಶೀರ್ವಚನ ನೀಡಿದರು.

ನಗರದ ಬಳ್ಳಾರಿ ರಸ್ತೆಯಲ್ಲಿರುವ ವೈಷ್ಣವಿ ಗ್ರಾಂಡ್ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ ಆರ್‌ಎಸ್‌ಎಂ ಮೂವೀಸ್ ಪ್ರೊಡಕ್ಷನ್ ಮೆಹಬೂಬ್ ಬಾಷಾ ಬಿದಿರಿ ಅವರ ನಿರ್ದೇಶನದ ಅಗಣಿತ ದನುಮಾನ ಕಿರು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಮುಖಂಡ ಚಿಟಕಿ ಹುಸೇನ್ ಸಾಬ್, ಹಿರಿಯ ಸಾಹಿತಿ ಗಾಯಕ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಹಾಜಿ ಅಬ್ದುಲ್ ನಬಿ, ಮಹಬೂಬ್ ಬಾಷಾ ಅವರು ಮಾತನಾಡಿದರು.

ಇಮಾಮೊ ಖತೀಬ್, ಟಿ.ರೆಹಮಾನ್, ಲೋಕೇಶ್, ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಮೀರ್ ಹುಸೇನ್, ರೌಫ್ ಬಿದಿರಿನೂರ್, ಬಾಷಾ ವೇದಿಕೆದಲ್ಲಿದ್ದರು.

ಭಾರ್ಗವ, ರೇಷ್ಮಾ, ಮೋಹನ್, ರಾಮಾಂಜನಿ, ಅಯ್ಯುಬ್, ನಿಖಿಲ್, ರಾಮ್, ಚಕ್ರವರ್ತಿ, ಹಸೀನಾ, ನೂರುಲ್ಲಾ, ತರಂಗಿಣಿ, ರಾಜು, ವಿಜು, ಜಿಲಾನ್, ಮತ್ತಿತರರು ಇದ್ದರು.

ಆರಂಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಅಧ್ಯಕ್ಷರು ಲಕ್ಷ್ಮಣ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಸರ್ವರನ್ನು ಸ್ವಾಗತ ಬಯಸಿದರು.

ಅಗಣಿತ ದನುಮಾನ ಕಿರುಚಿತ್ರ ಶೀರ್ಷಿಕೆಯ ಕಥೆ ಚಿತ್ರಕಥೆ ಶ್ರೀಮಾತ ಚಂದ್ರಶೇಖರ್ ಸಂಗೀತ ಶೇಖರ್ ಆಚಾರಿ ಛಾಯಾಗ್ರಹಣ ಆನಂತ ರೆಡ್ಡಿ ಸಂಕಲನ ಶ್ರೀಕಾಂತ ಆಚಾರಿ ಮೆಹಬೂಬ್ ಬಾಷಾ ಬಿದಿರಿ ಅವರ ನಿರ್ದೇಶನದ ನಂಬರ್ ೧ ಆರ್ ಎಸ್ ಎಮ್ ಮೂವೀಸ್ ಪ್ರೊಡಕ್ಷನ್ ಮೆಹಬೂಬ್ ಬಾಷಾ ಬಿದಿರಿ ಅವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!