
PPP ಮಾದರಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ AIDSO ವಿರೋಧ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಕರ್ನಾಟಕ ರಾಜ್ಯ ಸರಕಾರವು ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ ರಾಜ್ಯದ ೧೧ ಜಿಲ್ಲೆಗಳಲ್ಲಿ PPP ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಹೊರಟಿದೆ ಅಂದರೆ ಸರಕಾರಿ ಹಾಗೂ ಖಾಸಗಿಯವರ ತಲಾ ಶೇಕಡಾ ೫೦% ಸಹಭಾಗಿತ್ವದಲ್ಲಿ ಈ ಕಾಲೇಜುಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ.
ಪ್ರತಿಯೊಂದು ಜಿಲ್ಲೆಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಓದುವ ಅವಕಾಶ ನೀಡಬೇಕೆಂದು ಈ ಯೋಜನೆ ಮಾಡುತ್ತಿರುವುದಾಗಿ ಸರಕಾರ ಹೇಳುತ್ತಿದೆ. ಆದರೆ ಈಗಾಗಲೇ ಸಂಪೂರ್ಣವಾಗಿ ಸರಕಾರದ ಅಡಿಯಲ್ಲಿರುವ ಕಾಲೇಜುಗಳ ಫೀಸ್‌ಗಳೇ ಗಗನಕ್ಕೇರಿದ್ದು, ಇನ್ನು ಖಾಸಗಿ ಸಹಭಾಗಿತ್ವದಿಂದ ಹೇಗೆ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಶಿಕ್ಷಣ ಸಿಗಲು ಸಾಧ್ಯ?
ಈಗಾಗಲೇ ದಕ್ಷಿಣ ಕನ್ನಡ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಹುಕಾಲದಿಂದ ಸರಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಜನರ ಬೇಡಿಕೆ ಇದೆ. ಈ ನಿತೀಯ ಮೂಲಕ PPP ಮಾದರಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಿದ್ದೇ ಆದರೆ ಜನ ಸರಕಾರದಿಂದ ವಂಚಿತರಾಗುತ್ತಾರೆ. ಸರಕಾರ ಖಾಸಗಿಯವರ ಲಾಭಿಗೆ ಶರಣಾಗಿರುವುದನ್ನು ಇದು ತೋರಿಸುತ್ತದೆ.
ಹೀಗಾಗಿ ಕೂಡಲೇ ಈ ನಿರ್ಧಾರವನ್ನು ಕೈಬಿಟ್ಟು ಸರಕಾರವೇ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಬೇಕೆಂದು AIDSO ಆಗ್ರಹಿಸುತ್ತದೆ.