
ಟಿ. ನಾಗಭೂಷಣ್ ಗೆ ಅಕ್ಕಿನೇನಿ ನಾಗೇಶ್ವರರಾವ್ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 27- ರಂಗಭೂಮಿ ಕಲಾವಿದ ಟಿ.ನಾಗಭೂಷಣ ಕಲಾ ಸೇವೆಯನ್ನು ಗುರ್ತಿಸಿ ಸಮತಾ ಸಾಹಿತಿ ಕಲಾ ಟ್ರಸ್ಟ್ ಅಕ್ಕಿನೇನಿ ನಾಗೇಶ್ವರರಾವ್ ಕಲಾ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಟ್ರಸ್ಟ್ ವತಿಯಿಂದ ನಗರದ ರಾಘವ ಸಂಗೀತ ಭವನದಲ್ಲಿ ಅಕ್ಕಿನೇನಿ ನಾಗೇಶ್ವರರಾವ್ 101ನೆ ಜಯಂತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಾಗಭೂಷಣ್ ಗೆ ಪ್ರಶಸ್ತಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಗಣ್ಯರು ಸಮತಾ ಸಾಹಿತಿ ಅಧ್ಯಕ್ಷರು ಡಾ. ಸುರೇಂದ್ರ ಬಾಬು, ರಾಘವ ಸ್ಮಾರಕ ಸಂಘ ಗೌರವ ಅದ್ಯಕ್ಷರು ಚೆನ್ನಪ್ಪ, ಕೋಟೇಶ್ವರ ರಾವ್, ಎಂ. ರಮಂಜಿನೆಯುಲು, ಪ್ರಭಾಕರ್, ವೆಂಕಟೇಶುಲು, ವಲಿ ಅಹಮ್ಮದ್, ಶ್ರೀನಿವಾಸ್, ಕೆ. ರಾಮಾಂಜಿ ನೆಯುಲು, ಡಾ ವೆಂಕಮಾಂಬ , ಮಲ್ಲಿಕಾರ್ಜುನ, ಭೀಮನೇನಿ ಭಾಸ್ಕರ್ ನಾಯುಡು, ಸುಬ್ರಮಣ್ಯ , ಗಂಗಣ್ಣ ಮುಂತಾದ ಕಲಾವಿದರು ಇದ್ದರು. ನಾಗಭೂಷಣನನ್ನು ಮಿತ್ರರು, ಕಲಾವಿದರು ಅಭಿನಂದಿಸಿದರು.