35c5ca71-4b41-4445-9acd-a5e8098c33c8

ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀಗಳ ತಂಡದಿಂದ ನಗರದಲ್ಲಿ ಬಿರುಸಿನ ಪ್ರಚಾರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18- ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕಕ್ಕೆ 5 ವರ್ಷಗಳ ಅವಧಿಗೆ ನಡೆಯುತ್ತಿರುವ (30 ಕಾರ್ಯಕಾರಿ ಸಮಿತಿ ಸದಸ್ಯರು 10 ಮಹಿಳೆಯರು ಸೇರಿ ಹಾಗೂ ಒಬ್ಬ ಅಧ್ಯಕ್ಷ ಸ್ಥಾನಕ್ಕೆ,) ಚುನಾವಣೆಯ ನಿಮಿತ್ತ ಶ್ರೀ ಶ್ರೀ ಶ್ರೀ ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡದ ಶ್ರೀ ಪಂಚಾಕ್ಷರಪ್ಪ ಬಿಚ್ಚಗಲ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿ ಸ್ಥಾನದ ಅಭ್ಯರ್ಥಿಗಳು ತಂಡದ ಪರವಾಗಿ ಮಾಜಿ ಶಾಸಕರ ಪುತ್ರರಾದ ಬಾಣಾಪುರ ನಾಗರಾಜ್ ಗೌಡ ನೇತೃತ್ವದಲ್ಲಿ ಇಂದು, ಬಳ್ಳಾರಿ ಮಹಾನಗರದ ಬಸವೇಶ್ವರನಗರ ಗಾಂಧಿನಗರ, ನೆಹರು ಕಾಲೋನಿ, ಮುಂತಾದ ಕಡೆ ಭೇಟಿ ನೀಡಿ ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯರುಗಳನ್ನ ಹಾಗೂ ಪ್ರಮುಖ ವೀರಶೈವ ಮುಖಂಡರುಳಾದ ಬಿ ವಿ ಬಸವರಾಜ್ ಸರ್ , ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೃತ್ಯುಂಜಯ ಜಿನಗ, ಆರ್‌ಎಚ್ ಎಂ ಚನ್ನಬಸಯ್ಯಸ್ವಾಮಿ, ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲನಗೌಡ, ಕಿರಣ್ ಸ್ವಾಮಿ, ಮಹೇಶ್ ಸ್ವಾಮಿ, ಮಂಜುನಾಥ ಸ್ವಾಮಿ, ಭೇಟಿ ಮಾಡಿ ನಮ್ಮ ತಂಡಕ್ಕೆ ಬೆಂಬಲಿಸಿ ಇನ್ನು ಹೆಚ್ಚಿನ ಮಟ್ಟಿಗೆ ನಮ್ಮ ವೀರಶೈವ ಸಮಾಜದ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡುತ್ತಾ ತಂಡದಧೇಯೋದ್ದೇಶಗಳನ್ನು ತಿಳಿಸಿ ಮತಯಾಚನೆ ಮಾಡಲಾಯಿತು,
ಈ ಸಂದರ್ಭದಲ್ಲಿ, ಬಾಣಾಪುರ್ ನಾಗರಾಜ್ ಗೌಡ, ಜೆ ವಿ ಮಂಜುನಾಥ, ಸಿರಿಗೇರಿ ನಾಗರಾಜ ಸ್ವಾಮಿ, ಮಧುರೆ ಕುಮಾರಸ್ವಾಮಿ, ದಾಸಪುರ ಅರುಣ್ ಕುಮಾರ್ , ಶಂಕರಮೂರ್ತಿ, ಕಮ್ಮರಚೇಡು ಮಂಜುನಾಥ, ಶ್ರೀಧರಗಡ್ಡೆ ನಿರಂಜನ, ಕಟ್ಟೆ ಬಸವ, ಜೋಳದ ರಾಶಿ ಲೋಕೇಶ್ ರೆಡ್ಡಿ , ಪ್ರಭುಶೇಕರ ಗೌಡ, ಹಲಕುಂದಿ ವೀರನಗೌಡ, ಶ್ರೀಧರ್ ಗೌಡ, ಮೆಡಿಕಲ್ ಸ್ಟೋರ್ ಪ್ರಕಾಶ್, ಶರಣಯ್ಯ ಸ್ವಾಮಿ, ಅನೇಕ ತಂಡದ ಬೆಂಬಲಿಗರು ಹಾಗೂ ಮುಂತಾದವರು ಉಪಸ್ಥಿತರಿದ್ದರು, ಎಂದು ಬಳ್ಳಾರಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನದ ಅಭ್ಯರ್ಥಿಯಾದಂತ ಶ್ರೀಮತಿ ಛಾಯಾ ಮಂಜುನಾಥ್ ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!