
ಶಿಕ್ಷಣದಿಂದ ಮಾತ್ರ ನಮ್ಮೆಲ್ಲರ ಅಭಿವೃದ್ಧಿ ಸಾಧ್ಯ : ಡಾ.ಗಣಪತಿ ಲಮಾಣಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆಪ್ಟೆಂಬರ್ ೧೭ ರಂದು ೭೭ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಡೆಯಿತು.
ಪ್ರಚಾರ್ಯ ಡಾ.ಗಣಪತಿ ಲಮಾಣಿ ಮಾತನಾಡಿ, ಈ ಪ್ರದೇಶವನ್ನು ಮೊದಲು ಹೈದರಾಬಾದ್ ನಿಜಾಮರು ಆಳ್ವಿಕೆ ಮಾಡುತ್ತಿದ್ದರು. ಅನೇಕ ಮಹನಿಯರು ಹೋರಾಟ ಮಾಡಿದ ನಂತರ ೧೯೪೮ ಸೆಪ್ಟೆಂಬರ್ ೧೭ರಂದು ಈ ಭಾಗದ ಜನಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ತಿಳಿಸಿದರು.
ಇದು ಹಿಂದುಳಿದ ಪ್ರದೇಶ ಎಂದು ಗುರುತಿಸಿ ಸರಕಾರಗಳು ಈ ಭಾಗಕ್ಕೆ ಅನೇಕ ಸೌಲಭ್ಯ ನೀಡಿವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ಶಿಕ್ಷಣದಿಂದ ಮಾತ್ರ ನಮ್ಮೆಲ್ಲರ ಅಭಿವೃದ್ಧಿ ಸಾಧ್ಯ ಹೀಗಾಗಿ ಈ ಭಾಗದ ಜನರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ನಮ್ಮ ದೇಶದಲ್ಲಿ ೫೨೦ ರಾಜರ ಸಂಸ್ಥಾನಗಳಿದ್ದವು. ಇವೆಲ್ಲವನ್ನು ಅಂದಿನ ನಮ್ಮ ನಾಯಕರು ಒಗ್ಗೂಡಿಸಿದರು. ಬ್ರಿಟಿಷರು ನಮ್ಮ ದೇಶವನ್ನು ೨೫೦ ವರ್ಷಗಳ ಕಾಲ ಆಳ್ವಿಕೆ ಮಾಡಿದರು. ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಅಳವಂಡಿಯ ಶಿವಮೂರ್ತಿಸ್ವಾಮಿಗಳು, ಮುಂಡರಗಿ ಭೀಮರಾಯ ಮತ್ತು ಇನ್ನಿತರರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ, ವಿಠೋಬ ಎಸ್., ಡಾ.ಹುಲಿಗೆಮ್ಮ, ಡಾ. ಮಲ್ಲಿಕಾರ್ಜುನ, ಡಾ.ಪ್ರದೀಪ್ ಕುಮಾರ್, ಡಾ.ನರಸಿಂಹ, ಡಾ.ಅಶೋಕ ಕುಮಾರ್, ಸುಮಿತ್ರಾ, ಸೌಮ್ಯ ಹಿರೇಮಠ, ಹನುಮಪ್ಪ, ಶ್ರೀಕಾಂತ್, ತಾರಮತಿ, ಲಕ್ಷ್ಮೀ ಎ.ಕೆ., ರುಕ್ಕಮ್ಮ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.