10 ರಂದು ದಿಶಾ ಸಭೆ : ಅಹವಾಲು ಸಲ್ಲಿಸಲು ಅವಕಾಶ
ಕರುನಾಡ ಬೆಳಗು ಸುದ್ದಿ
ವಿಜಯನಗರ, 7- ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ಇ ತುಕಾರಾಮ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃಧ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೆಪ್ಟೆಂಬರ್ ೧೦ರಂದು ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಬೆಳಿಗ್ಗೆ 11 ಗಂಟೆವರೆ ಸಾರ್ವಜನಿಕರು ತಮ್ಮ ಯಾವುದಾದರು ಕುಂದುಕೊರತೆ ಅಹವಾಲುಗಳಿದ್ದಲ್ಲಿ ತಹಸೀಲ್ದಾರರ ಕಚೇರಿ ಹೊಸಪೇಟೆಯಲ್ಲಿ ತಹಶೀಲ್ದಾರ ಅವರಿಗೆ ಖುದ್ದಾಗಿ ಮನವಿ ಸಲ್ಲಿಸಬಹುದು. ಅಂದು ನಡೆಯುವ ದಿಶಾ ಸಭೆಯಲ್ಲಿ ಮಂಡಿಸಿ ಮನವಿಗಳ ಬಗ್ಗೆ ಚರ್ಚಿಸಿ ಸದರಿ ಮನವಿಗಳಿಗೆ ನಿಯಮಾನುಸಾರ ಪರಿಹಾರ ನೀಡಲಾಗುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮನವಿ ಮಾಡಿದ್ದಾರೆ.