
ರಾಜ್ಯ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭತ್ತದ ನಾಡಿನ ಕ್ರೀಡಾಪಟುಗಳ ಅಮೋಘ ಸಾಧನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 19- ಭತ್ತದ ನಾಡಿನ ಕ್ರಿಡಾಪಟುಗಳು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ನ. ೧೩ ರಿಂದ ೨೦ ರವರೆಗೆ ನಡೆದ ೧೪ ರ ವಯೋಮಿತಿಯ ೩ನೇ ಕರ್ನಾಟಕ ರಾಜ್ಯ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ತಾಲೂಕಿನ ಕ್ರೀಡಾಪಟುಗಳು ವುಶೂ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾಗಿ ಅಮೋಘ ಸಾಧನೆಗೆ ಮುಂದಾಗಿದ್ದಾರೆ.
ಥಾವಲು (ಕಾಲ್ಪನಿಕ ಯುದ್ಧ) ಮತ್ತು ಸಾಂದಾ ( ಫೈಟ್ ) ವಿವಿಧ ತೂಕಗಳ ಆಧಾರದ ಮೇಲೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.
ಸಾಂದಾ (ಫೈಟ್) ೪೨ ಕೆಜಿ ವಿಭಾಗದಲ್ಲಿ ವಿಜಯಲಕ್ಷ್ಮಿ ದ್ವಿತೀಯ ಸ್ಥಾನ, ೩೯-ಕೆಜಿ ವಿಭಾಗದಲ್ಲಿ ಕೃತಿಕಾ – ತೃತೀಯಸ್ಥಾನ, ೪೫- ಕೆಜಿ ವಿಭಾಗದಲ್ಲಿ ಹೇಮಂತ್ – ತೃತೀಯ ಸ್ಥಾನ, ಸಚಿನ್ ನಾಯ್ಕ್ – ೬೦ ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಥಾವಲು (ಕಾಲ್ಪನಿಕ ಯುದ್ದ) ದಾಶು ವಿಭಾಗದಲ್ಲಿ ನಂದನ್ – ಪ್ರಥಮ ಸ್ಥಾನ, ತೈಜಿಕ್ವಾನ್ ವಿಭಾಗದಲ್ಲಿ ಸಂಜನಾ ದ್ವಿತೀಯ ಸ್ಥಾನ, ಚಾಂಗ್ ಕ್ವಾನ್ ವಿಭಾಗದಲ್ಲಿ ಕಾರ್ತಿಕ್ ತೃತೀಯ ಸ್ಥಾನ ಪಡೆದಿದ್ದಾರೆ ಮತ್ತು ಆಪ್ರೀನ್, ರಾಜಭಕ್ಷಿ , ರಾಕೇಶ್ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ ಎಂದು ಕ್ರೀಡಾಪಟುಗಳಿಗೆ ತರಬೇತಿ ನೀಡಿರುವಂತಹ ರಾಜ್ಯ ವುಶೂ ತರಬೇತಿದಾರರಾದ ಬಾಬುಸಾಬ್ ರವರು ತಿಳಿಸಿರುತ್ತಾರೆ.
ವಿಜೇತರಾದಂತಹ ಕ್ರೀಡಾಪಟುಗಳಿಗೆ ಪಾಲಕರು, ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.