2

ಗರಗ : 3ನೇ ಅಂಗನವಾಡಿ ಕೇಂದ್ರದ ದುಸ್ಥಿತಿಯ ಒಳನೋಟ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 26- ಹೋಬಳಿ ವ್ಯಾಪ್ತಿಯ ಜಿ.ನಾಗಲಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಗರಗ ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಪ್ರಸ್ತುತ ಶಾಲೆಯ ಒಳ ಕೊಠಡಿಯಲ್ಲಿ ದಾಸ್ತಾನು ಇಟ್ಟಿದ್ದು. ಕೊಠಡಿ ಶುಚಿತ್ವವಿಲ್ಲದೇ ಹಲವಾರು ಇಲಿ, ಹೆಗ್ಗಣಗಳು ಹಾಗೂ ಜಿರಳೆಗಳು ಸೇರಿಕೊಂಡಿವೆ, ಅದರಲ್ಲೇ ಮಕ್ಕಳಿಗೆ ಉಣಬಡಿಸುವ ದಾಸ್ತಾನುಗಳನ್ನು ಇಟ್ಟಿರುವುದರಿಂದ ಒಂದುವೇಳೆ ಅವುಗಳು ದಸ್ತಾನುಗಳಲ್ಲಿ ಸೇರಿಕೊಂಡು ಮಲ ಮೂತ್ರ ವಿಸರ್ಜಿಸಿದ ಅಹಾರ ಮಕ್ಕಳಿಗೆ ಉಣ ಬಡಿಸಿದರೆ ಆ ಮಕ್ಕಳ ಆರೋಗ್ಯದ ಪರಿಸ್ಥಿತಿ ಏನು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಒಂದಲ್ಲಾ ಒಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಶೌಚಾಲಯ ಕೊಠಡಿಯಂತಿರುವ ಸ್ವಚ್ಛತೆಯಿಲ್ಲದಿರುವ ರೂಮ್ ಗಳಲ್ಲಿ ದಾಸ್ತಾನುಗಳನ್ನು ಇಡಲಾಗಿದೆ. ಮಕ್ಕಳಿಗೆ ನೀಡಬೇಕಾದ ಆರೋಗ್ಯಕರ ಪೌಷ್ಟಿಕ ಆಹಾರವು ಮಗುವಿನ ದೈಹಿಕ ಮಾನಸಿಕ ಬೆಳವಣಿಗೆ ಭದ್ರಬುನಾದಿಯಾಗುವ ಬದಲು ಅಪಾಯಕಾರಿಯಾಗುವ ರೀತಿ ದಾಸ್ತಾನುಗಳನ್ನು ಕೊಠಡಿಯಲ್ಲಿಟ್ಟಿರುವುದು ಮಕ್ಕಳ ಬಗ್ಗೆ ಕಾಳಜಿ ವಹಿಸದಿರುವುದು ಶೋಚನಿಯವಾಗಿದೆ.

ಇದರ ಪಕ್ಕದಲ್ಲಿ ಮಕ್ಕಳು ಭಯದ ವಾತಾವರಣದಲ್ಲಿ ಕುಳಿತುಕೊಳ್ಳುವ ಮಲಗುವ ಪರಿಸ್ಥಿತಿ ಉಂಟಾಗಿದೆ.

ಮಳೆ ಬಂದು ಶಾಲೆಯಲ್ಲಿ ಇರುವ ಧಾಖಲೆ ಪುಸ್ತಕಗಳು , ಭಾಗ್ಯಲಕ್ಷ್ಮಿ, ಫೈನಾನ್ಸ್ ಹಾಗೂ ಜನನ ಮರಣ ರಿಜಿಸ್ಟರ್, ಮಾತೃ ಒಂದನಾ ರಿಜಿಸ್ಟರ್, ಹೀಗೆ ಹಲವಾರು ರೀತಿಯ ದಾಖಲೆಗಳು ನೀರು ಬಿದ್ದು ಹಾಳಾಗುತ್ತಿವೆ. ಈ ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯ ಇದ್ದು ನಿರುಪಯುಕ್ತವಾಗಿದೆ, ಮಕ್ಕಳು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ. ಇಂತಹ ಅಂಗನವಾಡಿ ದುಸ್ಥಿತಿಗಳನ್ನು ಇಲಾಖೆಯವರು ಪರಿಶೀಲಿಸಿ ಕ್ರಮಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರ ಅಗ್ರಹವಾಗಿದೆ.

Leave a Reply

Your email address will not be published. Required fields are marked *

error: Content is protected !!