
ಅನ್ನ ಭಾಗ್ಯ ಯೋಜನೆಯಿಂದ ಜನ ಸಾಮಾನ್ಯರ ಬದುಕು ಹಸನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 21- ರಾಜ್ಯ ಸರ್ಕಾರದ ಐದು ಗ್ಯಾರಂಟಿ ಮಹತ್ವಾಕಂಕ್ಷಿ ಯೋಜನೆಗಳಲ್ಲಿ ಒಂದಾದ ‘ಅನ್ನ ಭಾಗ್ಯ’ ಯೋಜನೆಯು ಬಡತನ ರೇಖೆಗಿಂತ ಕಡಿಮೆ ಇರುವ(ಬಿಪಿಎಲ್) ಪಡಿತರ ಕಾರ್ಡ್ ಹೊಂದಿದ ಬಡ ಕುಟುಂಬದವರ ಹಸಿವು ನೀಗಿಸುವುದರೊಂದಿಗೆ ಸಾಮಾನ್ಯರ ಬದುಕು ಹಸನಗೊಂಡಿದೆ.
ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡು ಹೊಂದಿರುವರ ಪ್ರತಿ ಕುಟುಂಬದ ತಲಾ ಒಬ್ಬರಿಗೆ ೧೦ ಕೆ.ಜಿ ಅಕ್ಕಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಅದರಂತೆ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತಿ ತಿಂಗಳು ತಲಾ ೦೫ ಕೆ.ಜಿ. ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ ೦೫ ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ೧೭೦ ರೂ. (ಪ್ರತಿ ಕೆ.ಜಿಗೆ ೩೪ ರೂಪಾಯಿಗಳಂತೆ) ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಅದರಂತೆಯೇ ಕಳೆದ ೨೦೨೩ರ ಜುಲೈ ತಿಂಗಳಿನಿAದಲೇ ಹಣ ಪಾವತಿ ಮಾಡಲಾಗುತ್ತಿದೆ.
ಭೂಮಿಯ ಮೇಲೆ ಜೀವಿಸಲು ಪ್ರಕೃತಿಯು ಗಾಳಿ, ನೀರು ಒದಗಿಸುತ್ತದೆ. ಆಹಾರ ಮಾತ್ರ ಮನುಷ್ಯರೇ ತಯಾರಿಸಿಕೊಳ್ಳುವುದು ಅಗತ್ಯ. ಹೀಗಿರುವಾಗ ಉಳ್ಳವರು ತಮ್ಮಲ್ಲಿನ ಹಣಬಲದಿಂದ ಆಹಾರ ಸಾಮಗ್ರಿ ಕೊಂಡುಕೊಳ್ಳವರು ಬಡವರು ಕೊಂಡು ಕೊಳ್ಳಲು ಶಕ್ತರಾಗಿರುವುದಿಲ್ಲ. ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಒದಗಿಸುವ ಅಕ್ಕಿ ಹಾಗೂ ದಿನಸಿ ಸಾಮಾನುಗಳಿಂದ ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ಮುಖ್ಯಮ0ತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಡವರ ಪರ ಕಾಳಜಿ ಇರುವ ಸರ್ಕಾರ, ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ಆಶಾಭಾವನೆ ಹೊಂದಿದೆ. ಬಡವರ ಹಾಗೂ ಜನ ಸಾಮಾನ್ಯರ ಏಳಿಗೆಗೆ ಸರ್ಕಾರ ಸನ್ನದ್ಧವಾಗಿದೆ.
ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಮಾಹಿತಿ : ಜಿಲ್ಲೆಯಲ್ಲಿ ಒಟ್ಟು ೩೫೭ ನ್ಯಾಯಬೆಲೆ ಅಂಗಡಿಗಳಿದ್ದು, ಒಟ್ಟು ೩,೪೦,೭೮೫ ಪಡಿತರ ಚೀಟಿಗಳಿವೆ. ಅದರಲ್ಲಿ ೨೫,೪೩೪ ಎಎವೈ ಕಾರ್ಡ್, ೨,೬೯,೮೨೮ ಬಿಪಿಎಲ್ ಕಾರ್ಡ್, ೪೫,೭೫೨೩ ಎಪಿಎಲ್ ಕಾರ್ಡ್ಗಳಿವೆ. ಕಳೆದ ೨೦೨೩ರ ಜುಲೈನಿಂದ ೨೦೨೪ರ ಆಗಸ್ಟ್ವರೆಗೆ ಜಿಲ್ಲೆಯ ಒಟ್ಟು ೨,೯೫,೨೬೨ ಫಲಾನುಭವಿಗಳಿಗೆ ರೂ.೧೭೦ ರಂತೆ ಡಿಬಿಟಿ ಮೂಲಕ ಒಟ್ಟು ೨೨೩,೭೧,೫೬,೯೯೦ ರೂ.ಗಳನ್ನು ಖಜಾನೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.