4

ಬೀದಿ ನಾಯಿ ದಾಳಿಗೆ ಮತ್ತೋರ್ವ ಬಾಲಕನಿಗೆ ತೀವ್ರ ಗಾಯ

ಕರುನಾಡ ಬೆಳಗು ಸುದ್ದಿ

ವಿಜಯನಗರ, 01- ನಗರದ ೦೧ನೇ ವಾರ್ಡಿನ ಚಿತ್ತವಾಡಗ್ಗಿಯಲ್ಲಿ ಅಯ್ಯನ್ ಎನ್ನುವ ೮ ವರ್ಷದ ಬಾಲಕನಿಗೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಪರಿಣಾಮ ಮಗುವಿನ ಎರಡು ಕಾಲುಗಳಿಗೆ ತೀವ್ರತರ ಗಾಯಗಳಾಗಿ ಆಸ್ಪತ್ರೆಗೆ ಧಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಸ್ಥಳದಲ್ಲೇ ಇದ್ದ ಭಗತ್ ಸಿಂಗ್ ರಕ್ತದಾನಿಗಳ ಸಂಘದ ಸದಸ್ಯರಾದ ಅಲ್ತಾಫ್ ಮತ್ತು ಕೆ.ಎಂ.ಸಂತೋಷ್ ಕುಮಾರ್ ರವರು ತಕ್ಷಣವೇ ಮಗುವನ್ನು ರಕ್ಷಿಸಿ ಚಿತ್ತವಾಡಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೊಸಪೇಟೆಯ ಸರ್ಕಾರಿ ೧೦೦ ಹಾಸಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ.

ಬೀದಿ ನಾಯಿಗಳ ದಾಳಿಗಳನ್ನು ತಪ್ಪಿಸಲು ಹಲವಾರು ಬಾರಿ ಭಗತ್ ಸಿಂಗ್ ರಕ್ತಧಾನಿಗಳ ಸಂಘ ಹಾಗೂ ನಗರದ ಸಂಘ-ಸಂಸ್ಥೆಗಳ ಮುಖಾಂತರ ನಗರಸಭೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು ಸಹ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವಹಿಸಿರುವುದು ಶೋಚನೀಯ ಸಂಗತಿ. ಬೀದಿ ನಾಯಿಗಳ ದಾಳಿಗೊಳಗಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳು ಕೇವಲ ಬಿಡಿಗಾಸಿನ ಪರಿಹಾರ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವುದನ್ನು ಬಿಟ್ಟು ಬೀದಿ ನಾಯಿಗಳ ದಾಳಿ ಪ್ರಕರಣದಲ್ಲಿ ಕನಿಷ್ಠ ೧ ಲಕ್ಷ ರೂಪಾಯಿ ಪರಿಹಾರ ನೀಡುವಂತಾಗಬೇಕು ಮತ್ತು ಚಿಕಿತ್ಸೆಯ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಹಿಸಿಕೊಳ್ಳಬೇಕು. ಹಾಗೂ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಹೊಸಪೇಟೆ ವಿಜಯನಗರ ಜಿಲ್ಲೆ ಭಗತ್ ಸಿಂಗ್ ರಕ್ತಧಾನಿಗಳ ಸಂಘ ಅಧ್ಯಕ್ಷ ಕೆ.ಎಂ.ಸAತೋಷ್ ಕುಮಾರ್ ಅಗ್ರಹಿಸಿದ್ದಾರೆ.

ನಗರದಲ್ಲಿ ಮಕ್ಕಳ ಮೇಲೆ ಬಿದಿನಾಯಿಗಳ ದಾಳಿ ಹೆಚ್ಚಾಗಿದೆ ನಗರಸಭೆಯವರು ನಿಯಂತ್ರಿಸುವಲ್ಲಿ ವಿಪಲವಾಗಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!