2

ರೈಲ್ವೆ ಹಳಿಗಳನ್ನು ಸ್ಥಳಾಂತರಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 6- ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸಂಗನಕಲ್ಲು, ಹದ್ದಿನ ಗುಂಡು, ಕಪ್ಪುಗಲ್ಲ ರೋಡ್, ತಾಳೂರು ರೋಡ್, ವ್ಯಾಪ್ತಿಯಲ್ಲಿ ಇರುವ ರೈಲ್ವೆ ಹಳ್ಳಿಗಳನ್ನು ಜನರು ವಾಸಿಸುವ ಸ್ಥಳಗಳಿಂದ ದೂರ ಪ್ರಾಂತಗಳಿಗೆ ಸ್ಥಳಾಂತರಿಸಬೇಕು ಎಂದು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರು ವಿ.ಸೋಮಣ್ಣ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ, ಸಂಗನಕಲ್ಲು ಕೃಷ್ಣಪ್ಪ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪ ಮಾತನಾಡುತ್ತಾ ಜನರ ವಾಸಿಸುವ ಸ್ಥಳಗಳಲ್ಲಿ ರೈಲ್ವೆ ಹಳಿಗಳು ಹಾದು ಹೋಗುತ್ತಿರುವುದರಿಂದ ಇಲ್ಲಿ ಸಂಚರಿಸುವ ಜನರಿಗೆ ಅನಾನುಕೂಲವಾಗಿರುತ್ತದೆ ಎಂದು ತಿಳಿಸಿದರು.

ಅಷ್ಟೇ ಅಲ್ಲದೆ ನಗರಗಳು ಮತ್ತು ಗ್ರಾಮಗಳು ಬೆಳೆಯುತ್ತಿರುವುದನ್ನು ರೈಲ್ವೆ ಇಲಾಖೆ ಗಮನಿಸಿ ಜನರಿಗೆ ವಾಸಿಸುವ ಸ್ಥಳಗಳಿಂದ ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಇದರಿಂದ ಸಂಭವಿಸುವ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ಸಣ್ಣ ರೈತರದ ಅಂದರೆ ಎರಡು ಮೂರು ಎಕರೆ ಹೊಂದಿರುವ ರೈತರು ಅವರ ಬೇಸಾಯ ಭೂಮಿಗಳನ್ನು ಅಕ್ರಮಿಸಿ ಬದು, ಎಷ್ಟು ಸರಿ ಎಂದು ರಿಂಗ್ ರೋಡ್ ನಿರ್ಮಾಣದಿಂದ ಭೂಮಿಗಳು ರೈತರು ಕಳೆದುಕೊಳ್ಳುತ್ತಿರುವುದಾಗಿ ತಿಳಿಸಿದರು.

ಕೇಂದ್ರ ರೈಲ್ವೆ ಇಲಾಖೆ ಈ ವಿಷಯದ ಮೇಲೆ ಗಮನ ಹರಿಸಿ ನಾಗರಿಕರೊಂದಿಗೆ ಸಹಕರಿಸಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಬೇವಿನಗಿಡದ ಎರಿಸ್ವಾಮಿ, ಮಾರಣ್ಣ, ತಿಮ್ಮಪ್ಪ, ರಾಮಕೃಷ್ಣ, ನಾಗರಾಜ, ವಕೀಲ ಈರಣ್ಣ, ವಿಜೃಡಂ ಶಾಲೆಯ ಕಟ್ಟೇಗೌಡ, ಲಾಯರ್ ಮಲ್ಲಿ, ರಾಧಾಕೃಷ್ಣ, ಬೈಲೂರು ವೀರೇಶ, ಗೌತಮ್ ಟ್ರೇಡರ್ಸ್ ಗೋಪಾಲ್ ರೆಡ್ಡಿ ಹಾಗೂ ಈ ಭಾಗದ ರೈತ ಮುಖಂಡರು ಸಚಿವರಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!