
ಯುವತಿ ಕಾಣೆ : ಪತ್ತೆಗೆ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 3- ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಜಲಿ ಪ್ರಜಾಪತಿ ಎನ್ನುವ ೨೪ ವರ್ಷದ ಯುವತಿಯು ಹೊಸಪೇಟೆ ರೈಲು ನಿಲ್ದಾಣದಲ್ಲಿ ಅ.೦೨ ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.
ಯುವತಿಯ ಚಹರೆ : ಎತ್ತರ ೧೫೭ ಸೆಂ.ಮೀ., ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕಪ್ಪು ಬಣ್ಣದ ಕೂದಲು ಹೊಂದಿದ್ದು, ಯುವತಿ ಕಾಣೆಯಾದ ಸಂರ್ದಭದಲ್ಲಿ ಕೆಂಪು ಮತ್ತು ತಿಳಿ ಹಳದಿ ಬಣ್ಣದ ಡಿಜೈನ್‌ವುಳ್ಳ ಚೂಡಿದಾರ ಹಾಗೂ ಕೆಂಪು ಬಣ್ಣದ ವೇಲ್ ಧರಿಸಿರುತ್ತಾರೆ. ಕನ್ನಡ ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಾಳೆ.
ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪಿಎಸ್ ದೂ.೦೮೩೯೨-೨೭೬೦೬೩, ಮೊ.೯೪೮೦೮೦೨೧೩೧ ಅಥವಾ ಇ-ಮೇಲ್: beಟಟಚಿಡಿಥಿಡಿಟಥಿ@ಞsಠಿ,gov.iಟಿ ಮತ್ತು ಬೆಂಗಳೂರು ರೈಲ್ವೇ ಕಂಟ್ರೋಲ್ ರೂಂ ಇ-ಮೇಲ್: ಜಛಿಡಿಟಥಿ@ಞsಠಿ.gov.iಟಿ ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.