WhatsApp Image 2024-08-21 at 6.09.56 PM

ಅವಳಿ ನಗರಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆಗೆ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲರಿಗೆ ಮನವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 21- ಅವಳಿ ನಗರಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನಗರದ ರಸ್ತೆಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಮತ್ತು ಕೊಳಚೆ ನಿರ್ಮೂಲನಾ ವೇದಿಕೆಯಿಂದ ನಗರ ಸಭೆ ನೂತನ ಅಧ್ಯಕ್ಷ ಅಮ್ಜದ್ ಪಟೇಲರಿಗೆ ಬುಧವಾರ ಹೂಗುಚ್ಚ ನೀಡಿ ಸನ್ಮಾನಿಸಿ ಮನವಿ ಪತ್ರ ಅರ್ಪಿಸಿದರು.

ಮನವಿಯಲ್ಲಿ ಕೊಪ್ಪಳ ಹಾಗೂ ಭಾಗ್ಯನಗರದ ಅವಳಿ ನಗರಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.

ನಿತ್ಯ ಇಪ್ಪತ್ತನಾಲ್ಕು ತಾಸೂ ಕುಡಿಯುವ ನೀರು ಪೂರೈಕೆ ಮಾಡಲು ಅನುಕೂಲ ವಿದ್ದರೂ ಸಹ ಚುನಾಯಿತ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗುರುವಾರ ನೀರು ಬಂದರೆ ಶುಕ್ರವಾರ ಶನಿವಾರ ರವಿವಾರ ಬಿಟ್ಟು ಸೋಮವಾರ ನೀರು ಸರಬರಾಜು ಮಾಡುತ್ತಾರೆ.

ಅವಳಿ ನಗರಗಳಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿಗಳು ಬಂದರೂ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ನಾಗರಿಕರಿಗೆ ತಲುಪುತ್ತಿಲ್ಲ. ತಾವು ಮನಸ್ಸು ಮಾಡಿದರೆ ಈಗ ಇದ್ದ ವ್ಯವಸ್ಥೆಯಲ್ಲಿ ಅವಳಿ ನಗರಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬಹುದು. ತಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಪ್ಪತ್ತನಾಲ್ಕು ತಾಸೂ ಶುದ್ದ ಕುಡಿಯುವ ನೀರು ಸರಬರಾಜಿಗೆ ತಾಂತ್ರಿಕವಾಗಿ ಉತ್ತಮ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಬಡಾವಣೆಗಳ ರಸ್ತೆಗಳಲ್ಲಿ ಅಲ್ಲಲ್ಲಿ ತೆಗ್ಗುಗಳು ಬಿದ್ದು. ಕೆಲವು ಕಡೆ ಅವೈಜ್ಞಾನಿಕವಾಗಿ ರಸ್ತೆಗಳಲ್ಲಿ ಉಬ್ಬುಗಳನ್ನು ಸೃಷ್ಟಿಸಿಕೊಂಡಿರುವುದರಿಂದ ದ್ವಿಚಕ್ರ ವಾಹನಗಳ ಸವಾರರ ಜೀವಕ್ಕೆ ಅಪಾಯಕಾರಿಯಾಗಿದ್ದು ತಕ್ಷಣ ದುರಸ್ತಿಗೊಳಿಸಬೇಕು.

ರಾತ್ರಿ ವೇಳೆ ಅಶೋಕ ವೃತ್ತ ಕತ್ತಲೆಯಲ್ಲಿರುತ್ತದೆ ತಕ್ಷಣ ನಾಲ್ಕು ಕಡೆಯಿಂದ ವೃತ್ತಕ್ಕೆ ಬೆಳಕು ಬೀಳುವಂತೆ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ, ಮುಖಂಡ ಮೌಲಾ ಹುಸೇನ್ ಹಣಗಿ, ನಾಗರಾಜ್ ಯಾದವ್, ಆದಿತ್ಯ ಟಿ.ಪಾತ್ರೋಟಿ ಮುಂತಾದವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!