
ಕೃಷಿ ಯಂತ್ರೋಪಕರಣಗಳು ಸೌಲಭ್ಯ ಪಡೆಯಲು ರೈತರಿಂದ ಅರ್ಜಿ : ಎಸ್.ಬಿ.ಪಾಟೀಲ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 4- ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ೨೦೨೪-೨೫ನೇ ಸಾಲಿನ ಸಣ್ಣ ನೀರಾವರಿಯ ಯೋಜನೆಯಲ್ಲಿ ಎಲ್ಲಾ ವರ್ಗದವರಿಗೆ ತುಂತುರು ನೀರಾವರಿ ಪೈಪುಗಳ ವಿತರಣೆ ಹಾಗೂ ಸಾಮಾನ್ಯ ವರ್ಗದವರಿಗೆ ಕೃಷಿ ಯಂತ್ರೋಪಕರಣಗಳು ಹಿಟ್ಟಿನ ಗಿರಣಿ ಶಾವಿಗೆ ಯಂತ್ರ ಎಣ್ಣೆ ತೆಗೆಯುವ ಯಂತ್ರಗಳ ಸೌಲಭ್ಯ ಪಡೆಯಲು ಆಸಕ್ತವುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಹೇಳಿದರು.
ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆದ ವಿವಿಧ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬೀಮ ಯೋಜನೆಯಡಿಯಲ್ಲಿ ಹಿಂಗಾರು ಮಳೆ ಮತ್ತು ನೀರಾವರಿ ಆಶ್ರಿತ ಜೋಳ ಸೂರ್ಯಕಾಂತಿ ಮೆಕ್ಕೆಜೋಳ ಕಡಲೆಗೆ ಡಿಸೆಂಬರ್ ೩೧ ಕೊನೆ ದಿನವಾಗಿರುತ್ತದೆ ಬೇಸಿಗೆ ಹಂಗಾಮಿನಲ್ಲಿ ಶೇಂಗಾ ಸೂರ್ಯಕಾಂತಿ ಈರುಳ್ಳಿ ಬೆಳೆಗೆ ನೊಂದಾಯಿಸಿಕೊಳ್ಳಲು ೨೮ ಫೆಬ್ರವರಿ ೨೦೨೫ ಕೊನೆಯ ದಿನ ವಾಗಿರುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.