
ಬ್ಯೂಟಿ ಪಾರ್ಲರ್, ಮಹಿಳಾ ಹೊಲಿಗೆ ತರಬೇತಿ, ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 3- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿAದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಉಚಿತ ತರಬೇತಿಯನ್ನು ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ಅಕ್ಟೋಬರ್ 05 ರಂದು ಸಂದರ್ಶನವಿರುತ್ತದೆ. ಮಹಿಳಾ ಹೊಲಿಗೆ ತರಬೇತಿ 30 ದಿನಗಳು, ಬ್ಯೂಟಿ ಪಾರ್ಲರ್ 30 ದಿನಗಳು, ಹೈನುಗಾರಿಕೆ ತರಬೇತಿ 10 ದಿನಗಳು ಇರುತ್ತವೆ. ಅಕ್ಟೋಬರ್ 07 ರಂದು ತರಬೇತಿಗಳು ಪ್ರಾರಂಭವಾಗುತ್ತವೆ.
ಅರ್ಹತೆಗಳು : ಅರ್ಜಿದಾರರು 18 ವರ್ಷದ ಮೇಲೆ ಮತ್ತು 45 ವರ್ಷ ಒಳಗಿನವರಾಗಿರಬೇಕು, ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು, ಕೊಪ್ಪಳ ಜಿಲ್ಲೆಯ ಭಾಗದವರಾಗಿರಬೇಕು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.
ದಾಖಲಾತಿಗಳು : ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ, 3 ಪಾಸ್‌ಪೋರ್ಟ್ ಸೈಜ್ ಪೋಟೋ, ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಪ್ರತಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ಮೋ: 08539-231038, 9483618178, 7259073827, 9538096796, 9481085217 ಗೆ ಸಂಪರ್ಕಿಸಬಹುದಾಗಿದೆ ಎಂದು ಎಸ್.ಬಿ.ಐ ಆರ್‌ಸೆಟಿ, ಕೊಪ್ಪಳ ಇವರ ಪ್ರಕಟಣೆ ತಿಳಿಸಿದೆ.