KB

ರೇಷ್ಮೆ ಇಲಾಖೆಯಿಂದ ನರೇಗಾ ಅಡಿಯಲ್ಲಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ವಿಜಯನಗರ, 29- 2025-26ನೇ ಸಾಲಿಗಾಗಿ ಹಿಪ್ಪುನೇರಳೆ ತೋಟ ಸ್ಥಾಪನೆ, ಹಿಪ್ಪುನೇರಳೆ ನರ್ಸರಿ ಮತ್ತು ಮರ ಪದ್ದತಿ ತೋಟ ಸ್ಥಾಪನೆಗಾಗಿ ನರೇಗಾ ಅಡಿಯಲ್ಲಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ರೇಷ್ಮೆ ಕೃಷಿ ಉಪ ನಿರ್ದೇಶಕರು ತಿಳಿಸಿದ್ದಾರೆ.

ರೇಷ್ಮೆ ತೋಟ ಸ್ಥಾಪನೆಯಿಂದ ವರ್ಷದಲ್ಲಿ ೫ ಬೆಳೆ, ತೋಟವನ್ನು ಎರಡು ವಿಭಾಗ ಮಾಡಿಕೊಂಡಲ್ಲಿ ವರ್ಷದಲ್ಲಿ ೧೦ ಬೆಳೆ ಬೆಳೆದು ಮಾಸಿಕ ಆದಾಯ ಪಡೆಯಬಹುದು. ವರ್ಷವಿಡಿ ಮನೆ ಮಂದಿಗೆಲ್ಲಾ ಉದ್ಯೋಗ ಮತ್ತು ಹೈನುಗಾರಿಕೆಗೆ ಸಹಕಾರಿ ಹಾಗೂ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇ-ಹರಾಜು, ಆ ದಿನವೇ ರೈತರ ಖಾತೆಗೆ ಹಣ ಪಾವತಿ ವ್ಯವಸ್ಥೆಗಳಿವೆ.

ಈಗ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಸಭೆಗಳನ್ನು ನಡೆಸುವ ಅಭಿಯಾನ ಪ್ರಾರಂಭಿಸಲಾಗಿದೆ. ರೈತ ಬಾಂಧವರು ಈ ಸಭೆಗಳಲ್ಲಿ ಭಾಗವಹಿಸಿ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದು ನರೇಗಾ ಅನುಷ್ಠಾನಕ್ಕಾಗಿ ರೇಷ್ಮೆ ಇಲಾಖೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ನಿಮ್ಮ ತಾಲೂಕಿನ ರೇಷ್ಮೆ ಇಲಾಖೆ ಕಛೇರಿಗಳನ್ನು ಸಂಪರ್ಕಿಸಬಹುದು ಅಥವಾ ಕೂಡ್ಲಿಗಿ: ೯೭೩೧೦೭೫೯೫೬, ಹಗರಿಬೋಮ್ಮನಹಳ್ಳಿ: ೯೮೪೫೧೦೦೬೪೮, ಹರಪನಹಳ್ಳಿ: ೯೮೪೫೧೦೦೬೪೮, ಕೊಟ್ಟೂರು: ೯೯೮೦೪೦೦೦೩, ಹೊಸಪೇಟೆ: ೮೧೨೩೩೩೪೬೭೪, ಹಡಗಲಿ:೮೦೫೦೯೪೮೯೧೯ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!