
ಯಲಬುರ್ಗಾ : ವಸತಿ ನಿಲಯಗಳಿಗೆ ಬಾಡಿಗೆ ಕಟ್ಟಡಕ್ಕೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಯಲಬುರ್ಗಾ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಬಾಡಿಗೆ ಕಟ್ಟಡ ಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ (ಗ್ರೇಡ್-೨) ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ವಸತಿ ನಿಲಯದ ೨೦೦ ವಿದ್ಯಾರ್ಥಿಗಳಿಗೆ ಸೂಕ್ತವಾದ ಕೊಠಡಿ, ಅಡುಗೆ ಮನೆ, ಊಟದ ಕೊಠಡಿ, ಹಾಗೂ ೧೫-೨೦ ಶೌಚಾಲಯ ಮತ್ತು ಸ್ನಾನಗೃಹಗಳನ್ನು ಹೊಂದಿರುವ ಸುಸಜ್ಜಿತ ಬಾಡಿಗೆ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯವರ ನಿಗಧಿಪಡಿಸುವಂತಹ ಮಾಸಿಕ ಬಾಡಿಗೆಯನ್ನು ನೀಡಲಾಗುವುದು. ಇಚ್ಛೆಯುಳ್ಳ ಕಟ್ಟಡದ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಯಲಬುರ್ಗಾದ ಸಮಾಜ ಕಲ್ಯಾಣ ಇಲಾಖೆಯ (ಗ್ರೇಡ್-೨) ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ ೯೪೮೦೮೪೩೧೬೬ ಗೆ ಹಾಗೂ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.