2c136fae-be38-4577-97e1-318669006cc9

ವಿಕಲಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ವಿಜಯನಗರ, 1- ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಲು ಅರ್ಹ ವಿಕಲಚೇತನದಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಕೇಂದ್ರ ಸರ್ಕಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆಗಸ್ಟ್ ೩೧ ಹಾಗೂ ಮತ್ತು ನಂತರ ಮತ್ತು ಟಾಪ್ ಕ್ಲಾಸ್ ವಿದ್ಯಾರ್ಥಿ ವೇತನಕ್ಕಾಗಿ ಅಕ್ಟೋಬರ್ ೩೧ರೊಳಗಾಗಿ ಜಾಲತಾಣ: hಣಣಠಿs://sಛಿhoಟಚಿಡಿshiಠಿs.gov.iಟಿ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನಕ್ಕಾಗಿ ಮೆಟ್ರಿಕ್ ನಂತರ ಹಾಗೂ ಮೆಟ್ರಿಕ್ ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳು ಜಾಲತಾಣ: hಣಣಠಿs://ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿರುತ್ತದೆ.

ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲ್ಲೂಕಿನ ಎಮ್‌ಆರ್‌ಡಬ್ಲೂö್ಯ ಜೆ.ರವಿಕುಮಾರ ನಾಯಕ ಮೊ-೯೯೪೫೨೫೯೯೧, ಹರಪನಹಳ್ಳಿ ತಾಲ್ಲೂಕಿನ ಎಮ್‌ಆರ್‌ಡಬ್ಲೂö್ಯ ಆರ್.ಧನರಾಜ್ ಮೊ-೯೯೦೧೧೮೨೫೨೫, ಕೂಡ್ಲಿಗಿ ತಾಲ್ಲೂಕಿನ ಎಮ್‌ಆರ್‌ಡಬ್ಲೂö ಚೌಡೇಶ ಮೊ-೮೨೧೭೬೨೬೩೬೧, ಹೂವಿನ ಹಡಗಲಿ ತಾಲ್ಲೂಕಿನ ಎಮ್‌ಆರ್‌ಡಬ್ಲೂö ಮಂಜುನಾಥ ಮೊ-೯೯೦೦೮೯೦೪೦೩, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಎಮ್‌ಆರ್‌ಡಬ್ಲೂö್ಯ ಲಕ್ಷö್ಮಣ ಮೊ-೯೭೪೧೧೮೫೯೨೪, ಕೊಟ್ಟೂರು ತಾಲ್ಲೂಕಿನ ಎಮ್‌ಆರ್‌ಡಬ್ಲೂö ಲಕ್ಷೀ ಮೊ-೮೨೯೬೮೫೯೦೧೨, ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ತಾಲ್ಲೂಕು ಪಂಚಾಯತಿ ಆವರಣ, ಸಂಡೂರು ರಸ್ತೆ, ಹೊಸಪೇಟೆ ಇವರನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಿ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!