
ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 4- 2024-25 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಅನುಷ್ಠಾನಗೊಳಿಸುತ್ತಿದ್ದು ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಪ್ರತಿಯೊಬ್ಬ ಫಲಾನುಭವಿಗೆ ಘಟಕಗಳನ್ನು ಪ್ಯಾಕೇಜ್ ರೂಪದಲ್ಲಿ ಕಡ್ಡಾಯವಾಗಿ ಅನುಷ್ಠಾನ ಮಾಡುವುದು.
ರೈತ ಭಾಂದವರು ಸಂಬ0ಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ರೈತರು ಕನಿಷ್ಠ 1 ಎಕರೆ ಜಮೀನನ್ನು ಹೊಂದಿರಬೇಕು. ಸದರಿ ಯೋಜನೆಯನ್ನು ಜಿಲ್ಲೆಯ ರೈತರ ಅವಶ್ಯಕತೆಗನುಗುಣವಾಗಿ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡAತೆ ಕಾರ್ಯಕ್ರಮ ಅನುಷ್ಠಾನಗೊಳಿಸುವುದು.
ಘಟಕಗಳು : 1. ಕ್ಷೇತ್ರ ಬದು ನಿರ್ಮಾಣ (ಸಾಮಾನ್ಯ ವರ್ಗ 80 ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗ 90 ರಷ್ಟು ಇರುತ್ತದೆ). 2. ಕೃಷಿ ಹೊಂಡ (ಸಾಮಾನ್ಯ ವರ್ಗ 80ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗ 90ರಷ್ಟು ಇರುತ್ತದೆ). 3. ನೀರು ಇಂಗದAತೆ ತಡೆಯಲು ಪಾಲಿಥೀನ್ ಹೊದಿಕೆ (ಸಾಮಾನ್ಯ ವರ್ಗ 80ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗ 90ರಷ್ಟು ಇರುತ್ತದೆ.) 4. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (ಸಾಮಾನ್ಯ ವರ್ಗ 40ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗ 50ರಷ್ಟು ಇರುತ್ತದೆ.) 5. ಕೃಷಿ ಹೊಂಡದಿAದ ನೀರು ಎತ್ತಲು ಡಿಸೇಲ್/ಪೇಟ್ರೋಲ್ ಪಂಪ್‌ಸೆಟ್ (ಸಾಮಾನ್ಯ ವರ್ಗ 80ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗ 90ರಷ್ಟು ಇರುತ್ತದೆ.) 6.ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ (ಎಲ್ಲಾ ವರ್ಗದ ರೈತರಿಗೆ 90ರಷ್ಟು ಸಹಾಯಧನ ಇರಿಸಲಾಗಿದೆ) ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.