
ಮೀನುಗಾರಿಕೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಜಿಲ್ಲೆಯ ಎಲ್ಲಾ ತಲೂಕು ಮೀನುಗಾರಿಕೆ ಇಲಾಖೆಯಿಂದ 2024-25ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಮೀನುಗಾರಿಕೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮೀನುಗಾರಿಕೆ ಇಲಾಖೆಯ ಜಿಲ್ಲಾ ವಲಯ ಯೋಜನೆ, ರಾಜ್ಯ ವಲಯ ಹಾಗೂ ಕೇಂದ್ರ ವಲಯ ಯೋಜನೆಗಳಾದ ಮೀನುಗಾರರಿಗೆ ಸಲಕರಣೆ ಕಿಟ್ಟುಗಳ ಖರೀದಿಗೆ ಸಹಾಯಧನ, ಮೀನುಮರಿ ಖರೀದಿಗೆ ಸಹಾಯಧನ, ಕೆರೆಯ ಹಂಚಿನಲ್ಲಿ ಮೀನುಮರಿ ಪಾಲನಾ ಕೊಳ ನಿರ್ಮಾಣಕ್ಕೆ ಸಹಾಯಧನ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ (ಪ.ಜಾತಿ, ಪ.ಪಂಗಡ ಮತ್ತು ಸಾಮನ್ಯ ವರ್ಗ) ಮೀನುಕೊಳ ನಿರ್ಮಾಣಕ್ಕೆ ಸಹಾಯಧನ (ಪ.ಜಾತಿ, ಪ.ಪಂಗಡ ಮತ್ತು ಸಾಮನ್ಯ ವರ್ಗ) ಮತ್ತು ಮತ್ಸ್ಯವಾಹಿನಿ ಯೋಜನೆಗಳಡಿ ಕುಷ್ಟಗಿ ನೋಂದಾಯಿತ ಮೀನುಗಾರಿಕೆ ಸಹಕಾರ ಸಂಘಗಳಲ್ಲಿನ ಮೀನುಗಾರರ ಫಲಾನುಭವಿಗಳಿಗೆ ಮೊದಲ ಆದ್ಯತೆ ಷರತ್ತಿಗೊಳಪಟ್ಟು ಒಳನಾಡು ಮೀನುಗಾರರು, ಮೀನುಕೃಷಿಕರಿಗೆ ಸಹಾಯಧನ ಸೌಲಭ್ಯ ದೊರೆಯಲಿದೆ.
ಕೊಪ್ಪಳ ಜಿಲ್ಲೆಯ ಆಸಕ್ತ ಮೀನುಗಾರರು ಮತ್ತು ಸಾರ್ವಜನಿಕರು ಆಗಸ್ಟ್ 30ರೊಳಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕುಷ್ಟಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಗೆ ಸಂಪರ್ಕಿಸಬಹುದು ಎಂದು ಕುಷ್ಟಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.