
ಮತ್ಸ್ರ್ಯಾಶ್ರಯ ಯೋಜನೆಯಡಿ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಕೊಪ್ಪಳ ಮೀನುಗಾರಿಕೆ ಇಲಾಖೆಯಿಂದ ಮತ್ಸ್ರ್ಯಾಶ್ರಯ ಯೋಜನೆಯಡಿ ಕೊಪ್ಪಳ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರವಾರು ಮರು ಹಂಚಿಕೆಯಾಗಿರುವ ಮನೆಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
2022-23ನೇ ಸಾಲಿಗೆ ಮತ್ಸ್ರ್ಯಾಶ್ರಯ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ 19, ಪರಿಶಿಷ್ಟ ಜಾತಿ 04 ಮತ್ತು ಪರಿಶಿಷ್ಟ ಪಂಗಡ 02 ಸೇರಿ ಒಟ್ಟು 25 ಮನೆಗಳು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ 34, ಪರಿಶಿಷ್ಟ ಜಾತಿ 08 ಮತ್ತು ಪರಿಶಿಷ್ಟ ಪಂಗಡ 03 ಸೇರಿ ಒಟ್ಟು 45 ಮನೆಗಳು ಮರು ಹಂಚಿಕೆಯಾಗಿದ್ದು, ಕೊಪ್ಪಳ ಹಾಗೂ ಯಲಬುರ್ಗಾ ತಾಲ್ಲೂಕುಗಳಲ್ಲಿರುವ ನೋಂದಾಯಿತ ಮೀನುಗಾರರ ಸಹಕಾರ ಸಂಘಗಳಲ್ಲಿನ ಅರ್ಹ ಮೀನುಗಾರ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಮೀನುಗಾರ ಸದಸ್ಯರು, ಈ ಸೌಲಭ್ಯಕ್ಕೆ ಸಂಬಂಧಿಸಿದ ಸಹಕಾರ ಸಂಘಗಳ ಅಧ್ಯಕ್ಷರು/ ಕಾರ್ಯದರ್ಶಿ ಇವರ ಶಿಫಾರಸ್ಸಿನೊಂದಿಗೆ ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಯಡಿ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಮೀನುಗಾರಿಕೆ ಸಹಾಯಕ ನಿರ್ದೇಶಕರು ಕೊಪ್ಪಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.