2c136fae-be38-4577-97e1-318669006cc9

60 ದಿನಗಳ ವಸತಿ ಸಹಿತ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ವಿಜಯನಗರ, 29- ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 29 ರಿಂದ ಆಗಸ್ಟ್ 5 ರವರೆಗೆ ಅರ್ಜಿಗಳನ್ನು ಸ್ವೀಕರಿಸಲು ಅವಕಾಶವಿರಲಿದೆ.

ರಾಜ್ಯದ ಪಾರಂಪರಿಕವಾಗಿ ಚರ್ಮಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳ ಯುವ ಜನರಿಗೆ (ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿ ಜಾಂಬವ, ಮಚಗಾರ, ಮೋಚಿ ಹಾಗೂ ಇತರೆ ಚರ್ಮೋಗಾರಿಕೆಗೆ ಒಳಪಡುವ ಸಮುದಾಯಗಳಿಗೆ) ಪ್ರಸ್ತುತ ಚರ್ಮ ಉದ್ಯಮದಲ್ಲಿ ಚಾಲ್ತಿಯಲ್ಲಿರುವ ಹೊಸ ತಂತ್ರಜ್ಞಾನಗಳು, ವಿನ್ಯಾಸಗಳು ಹಾಗೂ ಮಾರುಕಟ್ಟೆಯ ಬೇಡಿಕೆಗಳನ್ನು ಪರಿಚಯಿಸಲು ಚರ್ಮ ಆಧಾರಿತ ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ಆಗ್ರಾ, ಉತ್ತರ ಪ್ರದೇಶ ಹಾಗೂ ಕೊಲ್ಕತ್ತಾ, ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿರುವ ಮೆ. ಸೆಂಟ್ರಲ್ ಪುಟ್‌ವೇರ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್/ಸೆಂಟರ್ ಇಲ್ಲಿಗೆ 60 ದಿನಗಳ ವಸತಿ ಸಹಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವಾದ ಪುಟ್‌ವೇರ್ ಡಿಸೈನಿಂಗ್ ಆ್ಯಂಡ್ ಪ್ರೊಡಕ್ಷನ್ ಪಡೆಯಲು ಕಳುಹಿಸಿಕೊಡಲಾಗುವುದು.

ವಿದ್ಯಾರ್ಹತೆ : 10ನೇ ತರಗತಿ ತೇರ್ಗಡೆ ಹೊಂದಿರಬೇಕು, ವಯೋಮಿತಿ 18 ರಿಂದ 40 ವರ್ಷಗಳು ಇರಬೇಕು.

ಸೌಲಭ್ಯಗಳು : ಅರ್ಹ ಅಭ್ಯರ್ಥಿಗಳ ಪ್ರಯಾಣ ವೆಚ್ಚಗಳನ್ನು ನಿಗಮದಿಂದ ಭರಿಸಲಾಗುವುದು, ತರಬೇತಿ ಸಂಸ್ಥೆಯಲ್ಲಿ ಉಪಹಾರ ಹಾಗೂ ಭೋಜನ, ವಸತಿಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು, ಅಭ್ಯರ್ಥಿಗಳಿಗೆ ತರಬೇತಿಯ ಅವಧಿಗೆ ಮಾತ್ರ ದಿನಕ್ಕೆ 200 ರೂ ರಂತೆ 60 ದಿನಗಳಿಗೆ 12,000 ರೂಗಳನ್ನು ವೆಜ್ ಲಾಸ್ ಅಲೊವೆನ್ಸ್ ಪಾವತಿಸಲಾಗುವುದು, ಮೊದಲನೇ ಹಂತದಲ್ಲಿ ಮೆ. ಸೆಂಟ್ರಲ್ ಫುಟ್‌ವೇರ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್. ಉತ್ತರ ಪ್ರದೇಶದ ಆಗ್ರಾ ತರಬೇತಿಯು ಆಗಸ್ಟ್ 19 ರಿಂದ ಪ್ರಾರಂಭವಾಗಿ ಅಕ್ಟೋಬರ್ 18 ರಂದು ಮುಕ್ತಾಯಗೊಳ್ಳುವ ತರಬೇತಿಗೆ 30 ಅಭ್ಯರ್ಥಿಗಳನ್ನು ನಿಯೋಜಿಸಲಾಗುವುದು.

ದಾಖಲಾತಿಗಳು : ವೈಯಕ್ತಿಕ ವಿವರ, 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಮೊದಲನೆ ಪುಟದ ಪ್ರತಿ, ಪಾಸ್ ಪೋರ್ಟ ಅಳತೆಯ 5 ಪೋಟೋಗಳು ಲಭ್ಯವಿರಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08392-271741, 8660667128, 9844667691 ಗೆ ಸಂಪರ್ಕಿಸಬಹುದಾಗಿದೆ. ಅರ್ಜಿದಾರರಿಗೆ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿಯನ್ನು ಲಿಡ್‌ಕರ್ ಲೆದರ್ ಎಂಪೋರಿಯA, ಬುಡಾ ಕಾಂಪ್ಲೇಕ್ಸ್, ಶಾಪ್ ನಂ. 24, ಗ್ರೌಂಡ್ ಪ್ಲೋರ್, ಮೊತಿ ಸರ್ಕಲ್, ಬಳ್ಳಾರಿ ಜಿಲ್ಲೆ ಕಚೇರಿಗೆ ಸಲ್ಲಿಸಲು ತಿಳಿಸಿದೆ ಎಂದು ವಿಜಯನಗರ ಜಿಲ್ಲೆಯ ಲಿಡಕರ್ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!