
ಸದಸ್ಯರಾಗಿ ಬಿಜೆಪಿಗೆ ಬೆನ್ನೆಲುಬಾಗಿ : ಡಾ.ಕ್ಯಾವಟರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಭಾರತೀಯ ಜನತಾ ಪಾರ್ಟಿ, ದೇಶ ಮೊದಲು ಸಂಸ್ಕೃತಿ, ಆಚಾರ-ವಿಚಾರ, ಧರ್ಮ, ಜನಪರ ಖಾಳಜಿ ಇವೆಲ್ಲವುಗಳ ಬಗ್ಗೆ ಸಂಘಟಿಸುವಂತಹ ಶಕ್ತಿ ದೇಶದಲ್ಲಿ ಯಾವುದಾದರೂ ಪಾರ್ಟಿ ಇದ್ದರೆ ಅದು ಬಿಜೆಪಿ ಪಕ್ಷ ಎಂದು ಹೇಳಬಹುದು ಹಾಗಾಗಿ ಯುವಕರು, ಹಿರಿಯರು, ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸದಸ್ಯರನ್ನಾಗಿ ನೋಂದಾಯಿಸಿ ತಾವೆಲ್ಲರೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಗೆ ಬೆನ್ನೆಲುಬಾಗಿ ನಿಂತುಕೊಂಡು ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಹೇಳಿದರು.
ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕವಲೂರು ಮತ್ತು ಅಳವಂಡಿ ಗ್ರಾಮದಲ್ಲಿ ಬಿಜೆಪಿ ಸಕ್ರಿಯ ಸದಸ್ಯತಾ ಅಭಿಯಾನ ಸಭೆಯಲ್ಲಿ ರವರು ಸಭೆಯಲ್ಲಿ ಮಾತನಾಡುತ್ತಿದ್ದರು.
ಭಾರತೀಯ ಜನತಾ ಪಾರ್ಟಿ ಒಂದಲ್ಲ ಒಂದು ರೀತಿಯಲ್ಲಿ ಜನಪರ ಯೋಜನೆಗಳ ಬಗ್ಗೆ ಚಿಂತನೆ ಮಾಡುತ್ತಾ ಸಂಘಟನೆಯ ಮೂಲಕ ನಿರಂತರವಾಗಿ ಜನರ ಮಧ್ಯದಲ್ಲಿ ಇದ್ದುಕೊಂಡು ಕೆಲಸ ನಿರ್ವಹಿಸುತ್ತಾ ಬಂದಿದೆ ಪ್ರಸ್ತುತ 6 ವರ್ಷಕ್ಕೊಮ್ಮೆ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವವನ್ನು ಸಕ್ರಿಯೆಗೊಳಿಸಲು ಅಥವಾ ಸದಸ್ಯತ್ವವನ್ನು ರಿನಿವಲ್ ಮಾಡಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.
ಬಿಜೆಪಿ ಪಕ್ಷದ ಸದಸ್ಯತ್ವ ಮಾಡುವಲ್ಲಿ ಗ್ರಾಮದ ಹಿರಿಯರು, ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ಪ್ರತಿ ಬೂತ್ ನಲ್ಲಿ ಸಕ್ರಿಯ ಸದಸ್ಯತ್ವ ಕರಪತ್ರಗಳಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ಬರೆದು ಕೂಡಲೇ ಸದಸ್ಯತ ಅಭಿಯಾನದಲ್ಲಿ ಸಕ್ರಿಯರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ಅಭಿಯಾನದ ಸಂಚಾಲಕರಾದ ಮಹಾಂತೇಶ್ ಪಾಟೀಲ್ ಮೈನಹಳ್ಳಿ, ಗ್ರಾಮೀಣ ಘಟಕದ ಅಧ್ಯಕ್ಷರಾದ ಪ್ರದೀಪ್ ಹಿಟ್ನಾಳ, ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಗಣೇಶ್ ಹೊರತಟ್ನಾಳ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವೀರೇಶ್ ಸಜ್ಜನ್, ರಮೇಶ್ ಮುದ್ಲಾಪುರ್, ಬಾಬು ಗೋಡೆಕರ್, ಶ್ರೀನಿವಾಸ್ ಕಲಾದಗಿ, ಉಮೇಶ್ ಅಳವಂಡಿ, ಕವಲೂರು ಗ್ರಾಮದ ಹಿರಿಯರಾದ ಮಲ್ಲೇಶಪ್ಪ, ಬಸಯ್ಯ ಸಿಂದೂಗಿಮಠ, ಮುದುಕಪ್ಪ ಗುಗ್ರಿ, ಮಾರುತಿ ಮಡಿವಾಳರ್ ಹೀಗೆ ಅನೇಕ ಮುಖಂಡರು ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.