3

ಆರೈಕೆದಾರರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ : ಬಿ.ಹಂಪಣ್ಣ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 29- ಸಾಮರ್ಥ್ಯ ಸಂಸ್ಥೆಯಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ, ಕೇರ‍್ಸ್ ವರ್ಲ್ಡವೈಡ್ (ಯುಕೆ) ಸಮೂಹ, ಇನ್ಹರ್‌ವ್ಹೀಲ್ ಕ್ಲಬ್ ಹಾಗೂ ವಿಶ್ವಚೇತನ ಆರೈಕೆರದಾರರ ಸಂಸ್ಥೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೈಕೆದಾರರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಇನ್ಹರ್‌ವ್ಹೀಲ್ ಕ್ಲಬ್ ಕೊಪ್ಪಳದ ಅಧ್ಯಕ್ಷೆö್ಯ ಶ್ರೀಮತಿ ಉಮಾ ತಂಬ್ರಳ್ಳಿ ಅವರು ಮಾತನಾಡುತ್ತಾ ಆರೈಕೆದಾರರ ಮಹತ್ವದ ಬಗ್ಗೆ ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮರ್ಥ್ಯ ಸಂಸ್ಥೆಯ ನಿರ್ದೇಶಕ ಬಿ.ಹಂಪಣ್ಣ ಮಾತನಾಡುತ್ತಾ ೨೦೧೬ರ ಕಾಯ್ದೆಯಲ್ಲಿ ನಮೂದಿತವಾಗಿರುವ ಆರೈಕೆದಾರರ ವಿಷಯವನ್ನು ತಿಳಿಸಿ, ಆರೈಕೆದಾರರಿಗೆ ಇರುವ ಸರ್ಕಾರದ ಕಾರ್ಯಕ್ರಮಗಳನ್ನು ತಿಳಿಸಿದರು.

ಇನ್ಹರ್‌ವ್ಹೀಲ್ ಕ್ಲಬ್ ಕೊಪ್ಪಳದ ಸಂಸ್ಥಾಪಕಿ ಡಾ.ರಾಧಾ ಕುಲಕರ್ಣಿ ಮಾತನಾಡಿ, ಆರೈಕೆದಾರರಿಗೆ ಸರ್ಕಾರ ಅದರಲ್ಲೂ ವಿಶೇಷವಾಗಿ ಕೊಪ್ಪಳ ನಗರಸಭೆಯಲ್ಲಿ ಆರೈಕೆದಾರರಿಗೆ ವಾರ್ಷಿಕ ಭತ್ಯೆ ನೀಡುತ್ತಿರುವುದರ ಬಗ್ಗೆ ಮಾತನಾಡಿ, ಈ ಕಾರ್ಯಕ್ರಮವು ಎಲ್ಲಾ ಆರೈಕರದಾರರಿಗೂ ಸಿಗುವಂತಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಸಮಾರಂಭದಲ್ಲಿ ಮತ್ತೋರ್ವ ಅತಿಥಿಯಾಗಿದ್ದ ವಿಶ್ವಚೇತನ ಆರೈಕೆದಾರರ ಸಂಸ್ಥೆಯ ಅಧ್ಯಕ್ಷೆö್ಯ ಶ್ರೀಮತಿ ವರ್ಷಾ ಮಾತನಾಡಿ, ತಮ್ಮ ಜೀವನ ಚರಿತ್ರೆಯನ್ನು ತಿಳಿಸುತ್ತಾ ಅವರಿಗೆ ಸಮೂಹ ಸಂಸ್ಥೆ ಯಾವ ರೀತಿ ನೆರವಾಗಿದೆ ಅವರ ಶ್ರಮದ ಪರವಾಗಿ ಈಗ ಅವರು ಸ್ವಂತ ಉದ್ಯೋಗದಲ್ಲಿ ತೊಡಗಿ ತನ್ನ ಗಂಡನ ಆರೈಕೆಯನ್ನು ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೈಕೆದಾರರಾದ ತೇಜಸ್ವಿನಿ ಮಾತನಾಡುತ್ತಾ ಆರೈಕೆದಾರರಿಗೆ ಅಗತ್ಯವಾದ ತರಬೇತಿಗಳಾಗಬೇಕು ಮತ್ತು “ಡೇ-ಕೆರ್ ಸೆಂಟರ್” ತೆರೆಯಬೇಕು ಎಂದು ಮಾತನಾಡಿದರು.

ಅದೇ ರೀತಿ ಕೊಪ್ಪಳ ತಾಲೂಕಿನ ಎಂಆರ್‌ಡಬ್ಲೂö್ಯ ಜಯಶ್ರೀ ಮಾತನಾಡುತ್ತಾ ಎಲ್ಲ ಗ್ರಾಮೀಣ ಕಾರ್ಯಕರ್ತರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರೈಕೆದಾರರ ಗುಂಪುಗಳನ್ನು ಮಾಡಬೇಕು ಎಂದು ತಿಳಿಸಿದರು.

ಅದೇ ರಿತಿ ವಿಶ್ವಚೇತನ ಆರೈಕೆದಾರರ ಸಂಸ್ಥೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಾದ ರೇಣುಕಮ್ಮ, ಯುಆರ್‌ಡಬ್ಲೂö್ಯ ಹನುಮಾಕ್ಷಿ, ಶ್ರಿಯುತ ದೇಸಾಯಿಯವರು ಯುಡಿಐಡಿ ಕಾರ್ಡಗಳ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಕೊನೆಯದಾಗಿ ಕೊಪ್ಪಳ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೇಶಪಾಂಡೆ ಮಾತನಾಡುತ್ತಾ ಸರ್ಕಾರದ ಮಟ್ಟದಲ್ಲಿ ಆರೈಕೆದಾರರಿಗೆ ಇರುವ ಕಾರ್ಯಕ್ರಮಗಳು ಮತ್ತು ಕಾರ್ಯಕ್ರಮ ಆಚರಣೆಯ ಉದ್ದೇಶ ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಭಾಷಣವನ್ನು ಮುಂದುವರೆಸಿ ನಾಲ್ಕು ರೀತಿಯ ತೀವ್ರತರ ವಿಕಲಚೇತನ ಮಕ್ಕಳ ಆರೈಕೆದಾರರಿಗೆ ಸರ್ಕಾರದಿಂದ ಸಿಗುವ ಗೌರವಧನದ ಬಗ್ಗೆ ವಿವರವಾಗಿ ತಿಳಿಸಿದರು.

ಈ ಕಾರ್ಯಕ್ರಮವನ್ನು ಸಾಮರ್ಥ್ಯ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಹೆಚ್.ಎನ್.ಬಸಪ್ಪ ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!