
ಸೂರ್ಯ ಪೌಂಡೇಶನ್ ವತಿಯಿಂದ ಸಾಧಕರಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ಸೂರ್ಯ ಪೌಂಡೇಶನ್ (ರಿ), ಬೆಂಗಳೂರು ವತಿಯಿಂದ ಕರ್ನಾಟಕದ ಪತ್ರಿ ಜಿಲ್ಲೆಗೆ ಒಂದು ಉತ್ತಮ ಪ್ರೌಢ ಶಾಲೆಗೆ ಶಿಕ್ಷಣ ಚೈತನ್ಯ ಪ್ರಶಸ್ತಿçಯನ್ನ ಹಾಗೂ ಶಿಕ್ಷಣಕ್ಕಾಗಿ ಸಲ್ಲಿಸಿದ ಸೇವೆಯನ್ನ ಗುರುತಿಸಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿç ಹಾಗೂ ನಿರೂಪಕರಿಗೆ ನೀಡಲಾಗುತ್ತಿದೆ.
ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ್ ಮಾಧ್ಯಮ ಶಾಲೆಗೆ ಶಿಕ್ಷಣ ಚೈತನ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಆ.೧೫ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ-೨೦೨೪ ರಲ್ಲಿ ಪ್ರದಾನ ಮಾಡಲಾಗುವದು. ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ್ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಪ್ರಶಸ್ತಿç ಸ್ವೀಕಸಲಿದ್ದಾರೆ.
ಆ.೧೬ ರಂದು ಇದೇ ಸಂಸ್ಥೆಯಿಂದ ಶಿಕ್ಷಣ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ, ಶಿಕ್ಷಣ ಸಂಯೊಜಕರಿಗೆ, ಬಿಆರ್‌ಪಿ, ಸಿಆರ್‌ಪಿಗಳಿಗೆ ಪ್ರತಿ ವರ್ಷ ಶಿಕ್ಷಣ ಸೇವಾ ರತ್ನ ಪ್ರಶಸ್ತಿçಯನ್ನು ನೀಡುತ್ತಾ ಬಂದಿದ್ದು, ಈ ವರ್ಷ ಕೊಪ್ಪಳ ಜಿಲ್ಲೆಯಿಂದ ಶಿಕ್ಷಕರಾದ ಉಮೇಶ ಬಾಬು ಸುರ್ವೆ ಹಾಗೂ ಭರಮಪ್ಪ ಕಟ್ಟಿಮನಿ, ಮಂಜುನಾಥ ಪಮ್ಮಾರ ರವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ-೨೦೨೪ರಲ್ಲಿ ನೀಡಲಾಗುತ್ತಿದೆ ಎಂದು ಸೂರ್ಯ ಪೌಂಡೇಶನ್ ಸಂಚಾಲಕರಾದ ಎಂ.ನಾರಾಯಣ ಸ್ವಾಮಿ ಚಿಂತಾಮಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.