4

ನಮ್ಮ ಸಾಂಸ್ಕೃತಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು : ಪರ್ವತಗೌಡ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24- ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಸ್ವಸ್ಥವೃತ್ತ ವಿಭಾಗದ ವತಿಯಿಂದ ೯ ನೇ ಆಯುರ್ವೇದ ದಿನಾಚರಣೆ ಹಾಗೂ ವಿಶ್ವ ಆಹಾರ ದಿನದ ಅಂಗವಾಗಿ “ಆಯುರ್ ಆಹಾರ ವೈಭವ” ಎಂಬ ಶೀರ್ಷಿಕೆ ಅಡಿ ಆಯುರ್ವೇದ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಡಾ.ಪರ್ವತಗೌಡ ಹಿರೇಗೌಡರ್ ಕೊಪ್ಪಳ ಜಿಲ್ಲಾ ಆಯುಷ್ ಅಧಿಕಾರಿಗಳು ಮಾತನಾಡಿ, ಇಂದಿನ ದಿನಮಾನದಲ್ಲಿ ಜನರಿಗೆ ಸರಿಯಾದ ಆಹಾರಕ್ರಮದ ತಿಳುವಳಿಕೆ ಕಡಿಮೆಯಾಗಿದ್ದು ಆಯುರ್ವೇದ ವೈದ್ಯರಾದ ನಾವು ಭಾರತೀಯ ಸಾಂಸ್ಕೃತಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

ಆಯುರ್ವೇದ ವಿದ್ಯಾರ್ಥಿಗಳು ಆಹಾರ ವಿಧಿಗಳ ಸಮಗ್ರ ಅಧ್ಯಯನ, ಪ್ರಾತ್ಯಕ್ಷೀಕತೆ ಹಾಗೂ ಚಿಕಿತ್ಸೆಯಲ್ಲಿ ಅಳವಡಿಸಿಕೊಂಡರೆ ರೋಗಿಗಳಿಗೆ ಒಳ್ಳೆಯ ಆರೋಗ್ಯವನ್ನು ನೀಡಬಹುದು. ಅನ್ನವೇ ಬ್ರಹ್ಮ, ಆಹಾರದಿಂದಲೇ ಆರೋಗ್ಯ ದೊರೆಯುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಂತೇಶ ಸಾಲಿಮಠ ಮಾತನಾಡಿ, ಸರಿಯಾದ ಆಹಾರ ಪದ್ಧತಿಯನ್ನು ಎಲ್ಲರೂ ಪಾಲಿಸಿದರೆ ಔಷಧಿಗಳ ಅಗತ್ಯತೆಯನ್ನು ಕಡಿಮೆ ಮಾಡಬಹುದೆಂದು ಆಹಾರದ ಪ್ರಾಮುಖ್ಯತೆಯನ್ನು ತಿಳಿಸಿದರು.

ಹಿರಿಯ ಪ್ರಾಧ್ಯಾಪಕ ಡಾ.ಕೆ.ಬಿ.ಹಿರೇಮಠ ಮಾತನಾಡಿ, ಪಥ್ಯ, ಅಪಥ್ಯ, ಆಹಾರ, ಸಾಂಪ್ರದಾಯಿಕ ಆಹಾರ ತಯಾರಿಕಾ ಕ್ರಮವನ್ನು ತಿಳಿಯುವುದು ಅಗತ್ಯವಿದೆ ಇದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಕಾರ್ಯಕ್ರಮದಲ್ಲಿ ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥರಾದ ಡಾ.ಪ್ರಭು ಸಿ. ನಾಗಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಆಹಾರ ಮೇಳದಲ್ಲಿ ಆಯುರ್ವೇದ ಆಧಾರಿತ ಆರೋಗ್ಯಕರ ಆಹಾರಗಳ ವಿವಿಧ ವೈವಿಧ್ಯಗಳನ್ನು ಸ್ವಸ್ಥವೃತ್ತ ವಿಭಾಗದ ಆಹಾರ ತಜ್ಞರು ಹಾಗೂ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.
ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೇರಿ ಸುಮಾರು ೪೫೦ ಜನರು ಆಹಾರ ಮೇಳವನ್ನು ವೀಕ್ಷಿಸಿ ಪ್ರಶಂಸಿದರು.

ಕಾರ್ಯಕ್ರಮದಲ್ಲಿ ಡಾ.ಅಮಲ್ ಚಂದ್ರನ್ ಸ್ವಾಗತ ಕೋರಿದರು, ಡಾ.ಆಶಾ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು, ಡಾ.ಸೋಮನಾಥ. ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ.ಲಕ್ಷಿö್ಮÃ ಸಂಗಟಿ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!