2

ಬ್ಯಾರಿಸ್ಟರ್ ಗಾಂಧೀಜಿ ಅಹಿಂಸಾ ಚಳುವಳಿ ನಡೆಸಿ ಯಶಸ್ವಿಯಾಗಿದ್ದರು : ಬಾಗೇಪಲ್ಲಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 6- ಬ್ಯಾರಿಸ್ಟರ್ ಆಗಿದ್ದ ಮಹಾತ್ಮಾ ಗಾಂಧೀಜಿಯವರು ಭಾರತದಲ್ಲಿ ಬ್ರಿಟಿಷ್ ಆಡಳಿತ ವಿರುದ್ದ ಅಹಿಂಸಾ ಮಾರ್ಗದ ಚಳುವಳಿ ನಡೆಸಿ ಯಶಸ್ವಿಯಾಗಿದ್ದರು ಎಂದು ಜಿಲ್ಲಾ ಭ್ರಾತೃತ್ವ ಸಮಿತಿಯ ಮುಖ್ಯಸ್ಥ ಹಾಗೂ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ನುಡಿದರು.

ನಗರದಲ್ಲಿ ಜಿಲ್ಲಾ ಭ್ರಾತೃತ್ವ ಸಮಿತಿಯಿಂದ ಮಹಾತ್ಮ ಗಾಂಧೀಜಿಯವರ ೧೫೫ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ೧೨೦ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಸಭೆಯಲ್ಲಿ ಮುಂದುವರೆದು ಮಾತನಾಡಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ಜಾನ್ಸ್ ಬರ್ಗ್ ಕ್ಕೆ ಹೋದಾಗ ಪ್ರಥಮ ದರ್ಜೆಯ ರೈಲು ಪ್ರಯಾಣ ಮಾಡುತ್ತಿದ್ದರು ಆಗ ರೈಲ್ವೆ ಅಧಿಕಾರಿ ಮತ್ತು ಕೆಲವು ಬಿಳಿಯರು ಇವರು ಕರಿಯರೆಂಬ ಕಾರಣಕ್ಕಾಗಿ ಮಹಾತ್ಮ ಗಾಂಧಿ ಅವರನ್ನು ಹೊರ ಹಾಕುತ್ತಾರೆ ಆಗ ಗಾಂಧೀಜಿ ಇಂತಹ ತಾರತಮ್ಯಗಳನ್ನು ಹೋಗಲಾಡಿಸಲು ಶಪಥದೊಂದಿಗೆ ಭಾರತಕ್ಕೆ ವಾಪಸ ಬಂದ ನಂತರ ಭಾರತದ ಸ್ವಾತಂತ್ರ‍್ಯ ಚಳುವಳಿಯ ನೇತೃತ್ವ ವಹಿಸುತ್ತಾರೆ.

ಇವರು ತಮ್ಮ ಹೋರಾಟಕ್ಕೆ ಅಹಿಂಸಾ ಮಾರ್ಗವನ್ನು ಪಾಲಿಸಿದರು,ಸತ್ಯ ನಿಷ್ಠೆ ಉಳ್ಳವರಾಗಿದ್ದರು, ಭಾರತೀಯರಿಗೆ ಸ್ವದೇಶಿ ವಸ್ತುಗಳನ್ನು ಕೊಳ್ಳಲು ಕರೆಕೊಟ್ಟ ಗಾಂಧೀಜಿ ಉಪ್ಪಿನ ಸತ್ಯಾಗ್ರಹದಂತಹ ಹಲವಾರು ಚಳುವಳಿಗಳನ್ನು ಮುನ್ನಡೆಸಿದ್ದಾರೆ, ಖಾದಿ ಬಟ್ಟೆ ಧರಿಸಲು ಕರೆ ನೀಡಿದ ಅವರು ಇದರಿಂದ ಭಾರತದಲ್ಲಿ ಹತ್ತಿ ಉತ್ಪಾದನೆಗೆ ಹೆಚ್ಚಿಸಲು ಹಾಗೂ ಸ್ವದೇಶಿ ವಸ್ತುಗಳನ್ನು ಬಳಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ನಮ್ಮವರಿಗೆ ಲಾಭ ಪಡೆಯಲು ಅನುಕೂಲವಾಗುತ್ತದೆ ಎಂಬ ಉದ್ದೇಶ ಹೊಂದಿದ್ದರು, ಸ್ವತಹ ಚರಕದಿಂದ ನೂಲು ತೆಗೆದು ಸಾವಿರಾರು ಜನರಿಗೆ ಮಾದರಿ ಯಾಗಿದ್ದರು, ಸ್ವಾತಂತ್ರ‍್ಯ ಬಂದ ನಂತರ ಅಧಿಕಾರಕ್ಕಾಗಿ ಆಸೆಪಡಲಿಲ್ಲ ಅವರ ಸರಳ ಜೀವನ ಹಾಗೂ ಬದುಕಿನ ಮೌಲ್ಯಗಳು ಅರಿತು ಅನುಸರಿಸುವುದು ಇಂದಿನ ಮಕ್ಕಳಿಗೆ ಅವಶ್ಯಕತೆ ಇದೆ ಎಂದು ಹೇಳಿದರು.

ಸಭೆಯಲ್ಲಿ ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.ಮುಖಂಡ ಚನ್ನಬಸಪ್ಪ ಅಪ್ಪಣ್ಣವರ್. ದರ್ಪಣ ಸಂಸ್ಥೆಯ ಶಶಿಕಲಾ ಡಿ.ಮಠದ,ಬೆಂಗಳೂರಿನ ಸಮಾಜ ಸೇವಕ ಶ್ರೀನಿವಾಸ ಹಾಗೂ ರಮಣ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!