14

ಕುಡುತಿನಿ ಪ.ಪಂ. ಅಧ್ಯಕ್ಷರಾಗಿ ಬಸಮ್ಮ ಚಂದ್ರಪ್ಪ ಯಾದವ್ ಅಧಿಕಾರ ಸ್ವೀಕಾರ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 29- ಜಿಲ್ಲೆಯ ಕುಡುತಿನಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾಗಿ ಬಸಮ್ಮ ಚಂದ್ರಪ್ಪ ಯಾದವ್ ಇಂದು ಅಧಿಕಾರ ಸ್ವೀಕಾರ ಮಾಡಿದರು.

19 ಜನ ಸದಸ್ಯರಿರುವ ಕುಡಿತಿನಿ ಪಟ್ಟಣ ಪಂಚಾಯಿತಿಗೆ ಕಳೆದ ಸೋಮವಾರದಂದು ಅಧ್ಯಕ್ಷ ಸ್ಥಾನಕ್ಕೆ ಬಸಮ್ಮ ಚಂದ್ರಪ್ಪ ಯಾದವ್ ಅವಿರೋಧವಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ಪತ್ರಿಕತರ ಜೊತೆ ಅಧ್ಯಕ್ಷರಾದ ಬಸಮ್ಮ ಮಾತನಾಡಿ, ಕುಡಿತಿನಿ ಪಟ್ಟಣವು ಜಿಲ್ಲೆಯಲ್ಲಿಯೇ ತೋರಣಗಲ್ ನಂತರ ಅತ್ಯಂತ ವೇಗವಾಗಿ ಬೆಳೆಯುವ ಪಟ್ಟಣವಾಗಿದೆ ಈ ಪ್ರದೇಶದಲ್ಲಿ ಹಲವಾರು ಖಾಸಗಿ ಕಂಪನಿ ಕಾರ್ಖಾನೆಗಳಿದ್ದು ಅವುಗಳಿಂದ ಧೂಳು ಮತ್ತು ವಾಯುಮಾಲಿನ್ಯ ಉಂಟಾಗುತ್ತದೆ, ಧೂಳು ಮುಕ್ತ ಪಟ್ಟಣವನ್ನು ಆಗಿ ಮಾಡುವುದೇ ನಮ್ಮ. ದ್ಯೆಯಾ ಎಂದು ಅವರು ತಿಳಿಸಿದರು.

ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ವಾಹನದ ಜನದಟ್ಟಣೆ ಕೂಡ ಹೆಚ್ಚಾಗಿದೆ ಇದನ್ನು ಅರಿತು ಸುಸೂತ್ರ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಕುಡುತಿನಿ ಪಟ್ಟಣದಲ್ಲಿ ಚರಂಡಿ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಪ್ಪ ಯಾದವ್, ಈರಣ್ಣ ಯಾದವ್ ಮತ್ತು ಪಟ್ಟಣ ಪಂಚಾಯ್ತಿಯ ಮುಖ್ಯ ಅಧಿಕಾರಿಗಳಾದ ಪಂಪಾಪತಿ ಮತ್ತು ಸಿಬ್ಬಂದಿಗಳು ಹಾಗೂ ಎಲ್ಲಾ 19 ಜನ ಪಟ್ಟಣ ಪಂಚಾಯತಿಯ ಸದಸ್ಯರು ಹಾಜರಿದ್ದರು. ನೂತನವಾಗಿ ಆಯ್ಕೆಯಾದ ಪಟ್ಟಣ ಪಂಚಾಯತಿ ಅಧ್ಯಕ್ಷ ಬಸ್ಸಮ್ಮ ಅವರಿಗೆ ಬಳ್ಳಾರಿ ಜಿಲ್ಲಾ ಕೋಲಾರ ಸಂಘದ ಅಧ್ಯಕ್ಷರಾದ ಪಿ ಗಾದೆಪ್ಪ ನಿರ್ದೇಶಕರಾದ ವಕೀಲ್ ತಿಮ್ಮಪ್ಪ ಯಾದವ್ ಪತ್ರಕರ್ತ ಗಿರಿ ಯಾದವ್ ಇನ್ನಿತರರು ಸೇರಿ ಸನ್ಮಾನಿಸಿ ಅಭಿನಂದಿಸಿದರು ಅಭಿನಂದಿಸಿದರು

Leave a Reply

Your email address will not be published. Required fields are marked *

error: Content is protected !!