
ಮಹಿಳೆಯರ ಆರ್ಥಿಕ ಮುನ್ನಡೆಗೆ ಮಾಸಿಕ ಸಂತೆ ಸಹಕಾರಿ : ಬಸಮ್ಮ ತೊಟಗಂಟಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 28- ತಾಲೂಕಿನಲ್ಲಿರುವ ಪ್ರತಿ ಗ್ರಾಮೀಣ ಭಾಗದಲ್ಲಿರುವ ಸ್ವ-ಸಹಾಯ ಸಂಘದ ಮಹಿಳೆಯರು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳ ಸೂಕ್ತ ಮಾರಾಟಕ್ಕಾಗಿ ಪ್ರೋತ್ಸಾಹ ನೀಡುವುದು. ಮತ್ತು ಪ್ರತಿ ಸಂಘಗಳ ಸದಸ್ಯರ ಆದಾಯವನ್ನು ಹೆಚ್ಚಿಸಿ. ಅವರು ಆರ್ಥಿಕವಾಗಿ ಮುಂದೆ ಬಂದು ಸ್ವಾವಲಂಬನೆಯಿ0ದ ಜೀವನ ನೆಡಸುವದೆ ಸಂಜೀವಿನಿ ಮಾಸಿಕ ಸಂತೆಯ ಉದ್ದೇಶವಾಗಿದೆ ಎಂದು ಮಹಿಳಾ ಸಂಜೀವಿನಿ ತಾಲೂಕ ಒಕ್ಕೂಟದ ಕಾರ್ಯದರ್ಶಿ ಬಸಮ್ಮ ತೊಟಗಂಟಿ ಹೇಳಿದರು.
ಪಟ್ಟಣದಲ್ಲಿ ಮಹಿಳಾ ಒಕ್ಕೂಟವು ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಆರ್ಥಿಕ ಮುನ್ನಡೆಗೆ ಮಾಸಿಕ ಸಂತೆಯ ಸಹಕಾರಿ ಯಾಗುತ್ತದೆ ಈ ಮಾರುಕಟ್ಟೆ ಯಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಹೆಚ್ಚು ಹೆಚ್ಚು ಗ್ರಾಹಕರು ಖರೀದಿ ಮಾಡುವದರಿಂದ ಸ್ವಸಹಾಯ ಸಂಘಗಳ ಮಹಿಳೆಯರ ಆದಾಯ ಹೆಚ್ಚುತ್ತದೆ ಮತ್ತು ಪರಿಶ್ರಮ ಸಾರ್ಥಕವಾಗುತ್ತದೆ ಮತ್ತು ತಾಲೂಕಿನಲ್ಲಿರುವ ಪ್ರತಿ ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಸಶಕ್ತಗೊಳಿಸಲು ಈ ಸಂಜೀವಿನಿ ಮಾಸಿಕ ಸಂತೆಯು ಪೂರಕವಾಗಿದೆ ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡು ಸ್ವಾಲಂಬಿಯಾಗಬೇಕು. ಗ್ರಾಹಕರು ಕೂಡ ವಿದೇಶಿ ವಸ್ತುಗಳ ಮಾರುಕಟ್ಟೆಯ ಖರೀದಿಗೆ ಮೊರೆ ಹೋಗದೇ ಸ್ಥಳಿಯ ಮಹಿಳೆಯರ ಸ್ವ ಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳನ್ನು ಖರೀದಿ ಮಾಡುವುದರ ಜೊತೆಗೆ ಇಂತಹ ಮಾಸಿಕ ಸಂತೆಗಳ ಬಲವರ್ಧನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಮಾಸಿಕ ಸಂತೆಯಲ್ಲಿ ಬಿಆರ್‌ಪಿಇಪಿ ಶಿಲ್ಪಾ ಉಳ್ಳಾಗಡ್ಡಿ, ಮಲ್ಲಿಕಾಬಿ ತಾಳಕೇರಿ, ಗೀತಾ ಸಜ್ಜನ್, ಮಾಹಂತಮ್ಮ ಪೋಲೀಸ್ ಪಾಟೀಲ್, ಕೃಷಿ ಸಖಿಯರು ಪಶು ಸಖಿಯರು ಹಾಗೂ ತಾಲೂಕಿನ ೩೬ ಸ್ವ-ಸಹಾಯ ಸಂಘಗಳು ಭಾಗವಹಿಸಿದ್ದರು.